ರಾಷ್ಟ್ರೀಯ

ಸರಕಾರಿ ಇಲಾಖೆಯ ವಿಡಿಯೋ ಕಾನ್ಫರೆನ್ಸ್‌ ಸಭೆ ನಡೆಯುತ್ತಿದ್ದ ವೇಳೆ ಪರದೆಯಲ್ಲಿ ಕಾಣಿಸಿಕೊಂಡಿತು ಸೆಕ್ಸ್‌ ಚಿತ್ರ !

Pinterest LinkedIn Tumblr

ಜೈಪುರ : ರಾಜಸ್ಥಾನ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ವಿಡಿಯೋ ಕಾನ್ಫರೆನ್ಸ್‌ ಸಭೆ ನಡೆಯುತ್ತಿದ್ದ ನಡುವೆಯೇ ಇದ್ದಕ್ಕಿದ್ದಂತೆ ಪರದೆಯಲ್ಲಿ ಸೆಕ್ಸ್‌ ವಿಡಿಯೋ ಕಾಣಿಸಿಕೊಂಡು ಅಧಿಕಾರಿಗಳೆಲ್ಲ ಮುಜುಗರ ಪಡುವ ಸನ್ನಿವೇಶ ತಲೆದೋರಿದ ಘಟನೆ ವರದಿಯಾಗಿದೆ.

ಈ ವಿಡಿಯೋ ಕಾನ್ಫರೆನ್ಸ್‌ ಸಭೆಯನ್ನು ಇಲಾಖಾ ಕಾರ್ಯದರ್ಶಿ ಮುಗ್ಧ ಸಿಂಗ್‌ ಅವರು ಸಚಿವಾಲಯದ ಎನ್‌ಐಸಿ ಹಾಲ್‌ ನಲ್ಲಿ ನಡೆಸುತ್ತಿದ್ದರು.

ಇಲಾಖೆಯ ಅಧಿಕಾರಿಗಳು, ಎನ್‌ಐಸಿ ಪ್ರತಿನಿಧಿಗಳು ಮತ್ತು ಇತರ 10 ಮಂದಿ ಹಾಲ್‌ನಲ್ಲಿ ಇದ್ದರು. ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಎಲ್ಲ 33 ಜಿಲ್ಲೆಗಳ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.

ಸಭೆಯಲ್ಲಿ ಇಲಾಖೆಯ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳ ಪ್ರಗತಿ ಪರಾಮರ್ಶೆ ನಡೆಯುತ್ತಿತ್ತು.

ಸಭೆ ನಡೆಯುತ್ತಿದ್ದಂತೆಯೇ ವಿಡಿಯೋ ಕಾನ್ಫರೆನ್ಸ್‌ ಪರದೆಯಲ್ಲಿ ಇದ್ದಕ್ಕಿದ್ದಂತೆಯೇ ಸೆಕ್ಸ್‌ ವಿಡಿಯೋ ಕೆಲ ಕಾಲ ಪ್ರಸಾರವಾಯಿತು.

ಘಟನೆಯಿಂದ ಕ್ರುದ್ಧರಾದ ಕಾರ್ಯದರ್ಶಿ ಮುಗ್ಧ ಸಿಂಗ್‌ ಅವರು ಕೂಡಲೇ ಎನ್‌ಐಸಿ ನಿರ್ದೇಶಕರನ್ನು ಕರೆಸಿಕೊಂಡು ಘಟನೆ ಬಗ್ಗೆ ತನಿಖೆ ನಡೆಸಿ ತನಗೆ ವರದಿ ಸಲ್ಲಿಸುವಂತೆ ಆದೇಶಿಸಿದರು.

ಎನ್‌ಐವಿ ನಿರ್ದೇಶಕರ ತನಿಖಾ ವರದಿ ಆಧರಿಸಿ ತಪ್ಪುಗಾರ ಸಿಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಗ್ಧ ಸಿಂಗ್‌ ಹೇಳಿದರು.

Comments are closed.