ರಾಷ್ಟ್ರೀಯ

ಯೋಗಿ ಆದಿತ್ಯನಾಥ್ ಮೋದಿ ಉತ್ತರಾಧಿಕಾರಿಯಾಗಲಿ: ಮೋಹನ್ ಭಾಗವತ್

Pinterest LinkedIn Tumblr


ಹೊಸದಿಲ್ಲಿ: ನಿರೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 303 ಸ್ಥಾನಗಳನ್ನು ಗಳಿಸಿ ಇತಿಹಾಸ ಸೃಷ್ಟಿಸಿದ್ದೂ ಆಗಿದೆ. ಮುಂದಿನ ಅವಧಿಗೂ ಅವರೇ ಪ್ರಧಾನಿಯಾಗಿ ಮುಂದುವರಿಯುವರೇ ಎಂಬ ಪ್ರಶ್ನೆಗೆ ಉತ್ತರದ ಸುಳಿವನ್ನು ಆರೆಸ್ಸೆಸ್‌ ವರಿಷ್ಠ ಮೋಹನ್ ಭಾಗವತ್‌ ನೀಡಿದ್ದಾರೆ.

ಈ ಹೊತ್ತಿನಲ್ಲಿ ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಉದ್ಭವಿಸದಿದ್ದರೂ, ‘ನರೇಂದ್ರ ಮೋದಿ ಅವರ ರಾಜನೈತಿಕ ವಾರಸುದಾರರಾಗಿ ಹಿಂದೂ ಹೃದಯ ಸಾಮ್ರಾಟ ಯೋಗಿ ಆದಿತ್ಯನಾಥ ಜೀ ಮಹಾರಾಜ್ ಆಗಬೇಕೆಂಬುದು ಅಪೇಕ್ಷೆ’ ಎಂದು ಭಾಗವತ್ ಟ್ವೀಟ್ ಮಾಡಿದ್ದಾರೆ.

2014ರ ಲೋಕಸಭಾ ಚುನಾವಣೆಗೆ ಸುಮಾರು ಎರಡು ವರ್ಷಕ್ಕೆ ಮೊದಲೇ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅವರ ಹೆಸರನ್ನು ಪ್ರಸ್ತಾಪಿಸುವ ಮೂಲಕ ಭಾಗವತ್‌ ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಿದ್ದರು.

ಇದೀಗ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿ ಮತ್ತೆ ಅಧಿಕಾರಕ್ಕೆ ಬಂದು ಎರಡು ದಿನಗಳಾಗುತ್ತಲೇ ಅವರ ಉತ್ತರಾಧಿಕಾರಿ ಕುರಿತ ಚರ್ಚೆಗೆ ಭಾಗವತ್ ನಾಂದಿ ಹಾಡಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರನ್ನು ನೇರವಾಗಿಯೇ ಪ್ರಸ್ತಾಪಿಸಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

‘ಮೋದೀಜಿ ಎರಡನೇ ಅವಧಿಗೆ ಪ್ರಧಾನಿಯಾಗಿದ್ದರೂ ಅಷ್ಟೊಂದು ದುಃಖಪಡದವರಿಗೆ, ಅಮಿತ್‌ ಶಾ ಅವರು ಗೃಹ ಸಚಿವರಾಗಿರುವುದು ಅತ್ಯಂತ ದುಃಖ ತಂದಿದೆ..! ಒಳ್ಳೆಯದೇ ಆಯಿತು’ ಎಂದು ಭಾಗವತ್‌ ಮತ್ತೊಂದು ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

Comments are closed.