ರಾಷ್ಟ್ರೀಯ

ಪಾಕ್ ತಂಡದ ನಾಯಕ ಧರಿಸಿದ್ದ ಉಡುಪು ಟ್ರೋಲ್!

Pinterest LinkedIn Tumblr


ನವದೆಹಲಿ: ಅಂತರರಾಷ್ಟ್ರೀಯ ಏಕದಿನ ವಿಶ್ವಕಪ್ 2019 ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವುದು ಗೊತ್ತಿರುವ ವಿಷಯ ಆದರೆ ಕ್ರಿಕೆಟ್​ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಬ್ರಿಟನ್​ ರಾಣಿ ಎಲಿಜಬೆತ್​ ಅವರನ್ನು 10 ದೇಶದ ಏಕದಿನ ಕ್ರಿಕೆಟ್​ ತಂಡದ ನಾಯಕರು ಭೇಟಿ ಮಾಡಿಸದ್ದರು. ವೇಳೆ ಪಾಕಿಸ್ತಾನ ತಂಡದ ನಾಯಕ ಸರ್ಫ್ರಾಜ್ ಅಹ್ಮದ್ ಅವರು ಧರಿಸಿದ್ದ ಸಾಂಪ್ರದಾಯಿಕ ವೇಷಭೂಷಣಕ್ಕಾಗಿ ಸಾಮಾಜಿಕ ತಾಣದಲ್ಲಿ ಟ್ರೋಲ್ ಆಗಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗುತ್ತಿದ್ದಂತೆ ಭಾರತೀಯರು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫ್ರಾಜ್ ಅಹ್ಮದ್ ಅವರ ಪರ ಟ್ವಿಟರ್​ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರು ತಮ್ಮ ಸಾಂಪ್ರದಾಯಿಕ ಉಡುಪು ಧರಿಸಿದ್ದರೇ ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರ ಉಡುಪಿನ ಬಗ್ಗೆ ಬೆಂಬಲ ಕೊಟ್ಟಿದ್ದಾರೆ.

ಪಾಕಿಸ್ತಾನ ತಂಡವು ನಿನ್ನೆ ವೆಸ್ಟ್​​ಇಂಡೀಸ್​​​​​​ ವಿರುದ್ಧ ಹೀನಾಯ ಸೋಲು ಕಂಡಿದ್ದು, ಮೊದಲು ಬ್ಯಾಟಿಂಗ್​ ಮಾಡಿದ್ದ ಪಾಕಿಸ್ತಾನ 105 ರನ್​ಗಳಿಗೆ ತನ್ನೆಲ್ಲಾ ವಿಕೆಟ್​​ ಕಳೆದುಕೊಂಡಿತ್ತು.

Comments are closed.