ರಾಷ್ಟ್ರೀಯ

ಮಾಲ್ಡೀವ್ಸ್​, ಶ್ರೀಲಂಕಾಕ್ಕೆ ಮೋದಿ ಭೇಟಿ; ವಿದೇಶಿ ಪ್ರವಾಸದ ವೇಳಾಪಟ್ಟಿ

Pinterest LinkedIn Tumblr


ನವದೆಹಲಿ: ಎರಡನೇ ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಜೂನ್ ತಿಂಗಳಲ್ಲಿ ಮಾಲ್ಡೀವ್ಸ್ ಹಾಗೂ ಶ್ರೀಲಂಕಾಕ್ಕೆ ಮೊದಲ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಪ್ರಧಾನಿ ಸಚಿವಾಲಯ ಸ್ಪಷ್ಟಪಡಿಸಿದೆ.

ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಮಾಲ್ಡೀವ್ಸ್ ರಾಷ್ಟ್ರಪತಿ ಮೊಹಮ್ಮದ್ ನಶೀದ್ ಹಾಗೂ ಶ್ರೀಲಂಕಾ ರಾಷ್ಟ್ರಪತಿ ಮೈತ್ರಿಪಾಲ ಸಿರಿಸೇನ ಅವರನ್ನು ಭಾರತ ಸರ್ಕಾರ ವಿಶೇಷ ಅತಿಥಿಗಳನ್ನಾಗಿ ಆಹ್ವಾನಿಸಿತ್ತು. ಆಹ್ವಾನ ಸ್ವೀಕರಿಸಿದ ಎರಡೂ ದೇಶದ ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಿದ್ದರು.

ನೆರೆ-ಹೊರೆಯ ದೇಶಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದುವ ಸಲುವಾಗಿ ನರೇಂದ್ರ ಮೋದಿ ಜೂನ್​ ತಿಂಗಳಿಂದಲೇ ವಿದೇಶ ಪ್ರವಾಸವನ್ನು ಕೈಗೊಳ್ಳುತ್ತಿದ್ದು ಮೊದಲು ಮಾಲ್ಡೀವ್ಸ್ ಹಾಗೂ ನಂತರ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಕುರಿತ ವೇಳಾಪಟ್ಟಿಯನ್ನು ಈಗಾಗಲೇ ಪ್ರಧಾನಿ ಸಚಿವಾಲಯ ಬಿಡುಗಡೆ ಮಾಡಿದೆ. 2014ರಲ್ಲಿ ಮೊದಲ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೋದಿ ಭೂತಾನ್ ರಾಷ್ಟ್ರಕ್ಕೆ ಭೇಟಿ ನೀಡಿದ್ದರು.

ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಶುಕ್ರವಾರ ದೆಹಲಿಯಲ್ಲಿ ಶ್ರೀಲಂಕಾ ರಾಷ್ಟ್ರಪತಿ ಮೈತ್ರಿಪಾಲ ಸಿರಿಸೇನ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಯೋತ್ಪಾದನೆ, ಲಂಕಾದಲ್ಲಿನ ಬಾಂಬ್​ ದಾಳಿ, ದಕ್ಷಿಣ ಏಷ್ಯಾ ಹಾಗೂ ಹಿಂದೂ ಮಹಾಸಾಗರದಲ್ಲಿ ಶಾಂತಿ ಪಾಲನೆ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆ ಮಾಡಲಾಗಿತ್ತು. ಈ ಸಂದರ್ಭಲ್ಲಿ ಮೋದಿ ಜೂನ್ ತಿಂಗಳಲ್ಲಿ ಲಂಕಾಗೆ ಪ್ರವಾಸ ತೆರಳುವ ಕುರಿತು ತೀರ್ಮಾನ ತೆಗೆದುಕೊಂಡರು ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.

ಮೋದಿಯವರ ಶ್ರೀಲಂಕಾ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಅಲ್ಲಿನ ರಾಷ್ಟ್ರಪತಿ ಮೈತ್ರಿಪಾಲ ಸಿರಿಸೇನಾ, “ಭಾರತ ಹಾಗೂ ಶ್ರೀಲಂಕಾ ನಡುವಿನ ಭಾತೃತ್ವಕ್ಕೆ 2600 ವರ್ಷಗಳ ಇತಿಹಾಸವಿದೆ. ನೆರೆಹೊರೆಯ ದೇಶಗಳ ಜೊತೆಗೆ ಉತ್ತಮ ಸಂಬಂಧವಿಟ್ಟುಕೊಳ್ಳುವುದನ್ನೇ ಶ್ರೀಲಂಕಾ ಭಯಸುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಪ್ರಧಾನಿ ಮೋದಿ ಆಗಮನವನ್ನು ಲಂಕಾ ಕಾಯುತ್ತಿದ್ದು, ಇದು ಲಂಕಾ ಜತೆಗೆ ಸಂದ ಗೌರವ” ಎಂದು ತಿಳಿಸಿದ್ದಾರೆ.

ನರೇಂದ್ರ ಮೋದಿ ಮೊದಲ ಅವಧಿಯಲ್ಲಿ ಪ್ರಧಾನಿಯಾಗಿದ್ದಾಗ ಬೇರೆ ವಿಷಯಗಳಿಗಿಂತ ವಿದೇಶ ಪ್ರವಾಸದ ವಿಷಯದಲ್ಲಿ ಟೀಕೆಗೆ ಗುರಿಯಾಗಿದ್ದೆ ಹೆಚ್ಚು. ಮೋದಿಯವರ ವಿದೇಶ ಪ್ರವಾಸದ ಬಗ್ಗೆ ವಿರೋಧ ಪಕ್ಷಗಳು ಸಾಕಷ್ಟು ಟೀಕಾಪ್ರಹಾರವನ್ನೇ ನಡೆಸಿದ್ದವು. ಆದರೆ, ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಮೋದಿಯ ಮುಂದಿನ ತಿಂಗಳ ವಿದೇಶ ಪ್ರವಾಸದ ವೇಳಾಪಟ್ಟಿ ಈಗಾಗಲೇ ಸಿದ್ದವಾಗಿದೆ.

Comments are closed.