ಕರ್ನಾಟಕ

ಮನೆಗೆ ನುಗ್ಗಿ ಹತ್ಯೆ ಮಾಡುತ್ತೇನೆಂದು ಧಮ್ಕಿ ಹಾಕಿದ ವ್ಯಕ್ತಿಗೆ ಮಹಿಳೆಯಿಂದ ಸಖತ್ ಗೂಸಾ!

Pinterest LinkedIn Tumblr


ಬೆಳಗಾವಿ: ಮನೆಗೆ ನುಗ್ಗಿ ಕೊಲೆ ಮಾಡುತ್ತೇನೆಂದು ಧಮ್ಕಿ ಹಾಕಿದ ವ್ಯಕ್ತಿಗೆ ಮಹಿಳೆ ಸಖತ್ ಗೂಸಾ ನೀಡಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಗಾವಿ ನಗರದ ಚಾವಟ್‌ ಗಲ್ಲಿಯಲ್ಲಿ ನಡೆದಿದೆ.

ಮಾರುತಿ ಸುತಾರ್ ಎಂಬುವರ ಮನೆಗೆ ನುಗ್ಗಿ ಕೊಲೆ ಮಾಡುತ್ತೇನೆಂದು ಸಿಂದೋಳ್ಳಿಯ ಮೋಹನ್ ಎಂಬಾತ ಬೆದರಿಕೆ ಹಾಕಿದ್ದು, ಈ ವೇಳೆ ಮೋಹನ್‌ಗೆ ಆ ಮನೆಯಲ್ಲಿದ್ದ ಮಹಿಳೆ ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನು ಮೋಹನ್, ಸುತಾರ್ ಮನೆಗೆ ನುಗ್ಗಿ ಧಮ್ಕಿ ಹಾಕಲು ಕಾರಣವೇನೆಂದರೆ, ಎರಡು ತಿಂಗಳ ಹಿಂದೆ ಮೋಹನ್ ಹಾಫ್ ಮರ್ಡರ್ ಮಾಡಿ, ಜೈಲು ಸೇರಿದ್ದ. ಎರಡು ದಿನಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ. ಈ ಬಗ್ಗೆ ಸುತಾರ್ ನ್ಯಾಯ ಪಂಚಾಯಿತಿ ಮಾಡಿದ ಕಾರಣಕ್ಕೆ ದ್ವೇಷವಿಟ್ಟುಕೊಂಡಿದ್ದ ಮೋಹನ್, ಸುತಾರ್ ಕೊಲೆ ಮಾಡಲು ಮನೆಗೆ ನುಗ್ಗಿದ್ದಾನೆ. ಆರೋಪಿ ಮೋಹನ್‌ನನ್ನು ಮಾರ್ಕೇಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments are closed.