ಕರ್ನಾಟಕ

ಅನೈತಿಕ ಸಂಬಂಧ; ಗಂಡನನ್ನೇ ಹತ್ಯೆಮಾಡಿ ಹೂತಿಟ್ಟು ನಾಟಕವಾಡಿದ ಹೆಂಡತಿ!

Pinterest LinkedIn Tumblr


ಮಂಡ್ಯ; ಅನೈತಿಕ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿ ಪತ್ನಿಯೇ ತನ್ನ ಗಂಡನನ್ನು ಕೊಂದು ಹೂತಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ಅರಕೆರೆ ಗ್ರಾಮದಲ್ಲಿ ನಡೆದಿದೆ.

ಅರಕರೆ ಗ್ರಾಮದ ಸತೀಶ್ ಮೃತ ದುರ್ದೈವಿ. ಸತೀಶ್ ಹಾಗೂ ಆತನ ಪತ್ನಿ ಕಾವ್ಯಾಗೆ 10 ವರ್ಷಗಳ ಹಿಂದೆಯೇ ಮದುವೆಯಾಗಿದೆ. ಮುದ್ದಾದ ಗಂಡು ಮಗವೂ ಇದೆ. ಆದರೆ, ಈ ನಡುವೆ ಅನೈತಿಕ ಸಂಬಂಧಕ್ಕೆ ಬಿದ್ದ ಪತ್ನಿ ಕಾವ್ಯ ತನ್ನ ಸಂಬಂಧಕ್ಕೆ ಗಂಡ ತೊಡಕಾಗಿದ್ದಾನೆ ಎಂದು ಆತನನ್ನೇ ಕೊಲೆಗೈದಿದ್ದಾಳೆ.

ಒಂದು ತಿಂಗಳ ಹಿಂದೆಯೇ ಪ್ರಿಯಕರ ಗುರು ಜೊತೆ ಸೇರಿ ತನ್ನ ಗಂಡ ಸತೀಶ್​ನನ್ನು ಕೊಲೆ ಮಾಡಿ ಶವವನ್ನು ಮಣ್ಣು ಮಾಡಿದ್ದಾಳೆ. ಆದರೆ, ತನ್ನ ಗಂಡ ಒಂದು ವಾರದಿಂದ ಮನೆಗೆ ಬಂದಿಲ್ಲ ಎಂದು ನಾಟಕವಾಡಿದ್ದಾಳೆ. ಇದರಿಂದಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮೃತ ಸತೀಶನ ತಾಯಿ ಮಗ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ಸತೀಶನನ್ನು ಹುಡುಕುವ ಕೆಲಸಕ್ಕೆ ಮುಂದಾದ ಪೊಲೀಸರಿಗೆ ಆತನ ಪತ್ನಿ ಕಾವ್ಯ ಮೇಲೆ ಅನುಮಾನ ಮೂಡಿದೆ. ನಂತರ ಆಕೆಯನ್ನು ವಿಚಾರಿಸಿದ ಬಳಿಕ ಇದೀಗ ಎಲ್ಲಾ ಸತ್ಯವೂ ಬಯಲಾಗಿದೆ. ಅಲ್ಲದೆ ಎಸಿ ಸಮ್ಮುಖದಲ್ಲಿ ಶವವನ್ನು ಹೊರತೆಗದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಕೃತ್ಯದಲ್ಲಿ ಭಾಗಿಯಾದ ಐವರಲ್ಲಿ ಪ್ರಿಯಕರ ಗುರು ಹಾಗೂ ಆತನ ಸಹಚರ ಅರ್ಜುನ್​ನನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳ ಹುಡುಕಾಟ ನಡೆಯುತ್ತಿದೆ. ಶ್ರೀರಂಗಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.