ಮನೋರಂಜನೆ

ಹಾಟ್ ಬೆಂಗಾಲಿ ಬೆಡಗಿ ಈಗ ಸಂಸದೆ!

Pinterest LinkedIn Tumblr


ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಸಿನಿಮಾ ನಟ-ನಟಿಯರು ಅದೃಷ್ಟಪರೀಕ್ಷೆಗೆ ಮುಂದಾಗಿದ್ದರು. ಅದರಲ್ಲಿ ಕೆಲವರು ಗೆದ್ದರೇ, ಹಲವರು ಮುಗ್ಗರಿಸಿದ್ದಾರೆ. ಈ ಪೈಕಿ ಮೊದಲ ಪ್ರಯತ್ನದಲ್ಲೇ ಜಯಗಳಿಸಿ ಪಾರ್ಲಿಮೆಂಟ ಮೆಟ್ಟಿಲೇರಿದ ಬಂಗಾಳಿ ನಟಿ, ಹಾಟ್ ಬೆಡಗಿ ನುಸ್ರತ್ ಜಹಾನ್ ಕೂಡ ಒಬ್ಬರು. ನುಸ್ರತ್ ಜಹಾನ್ ಎಂಪಿಯಾಗುತ್ತಿದ್ದಂತೆ ಆಕೆಯ ಹಾಟ್ ಹಾಟ್ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.

2011 ರಲ್ಲಿ ಸಿನಿ ಜೀವನ ಆರಂಭಿಸಿದ ನುಸ್ರತ್ ಜಹಾನ್, ಟಿಎಂಸಿ ಪಕ್ಷದ ತಾರಾ ಪ್ರಚಾರಕಿಯಾಗಿಯೂ ಕೆಲಸ ನಿರ್ವಹಿಸಿದ್ದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮಬಂಗಾಳದ ಬಸಿರಾತ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ನುಸ್ರತ್ ಜಹಾನ್ ಭರ್ಜರಿ ಜಯಗಳಿಸಿ ಪಾರ್ಲಿಮೆಂಟ್ ಮೆಟ್ಟಿಲೇರಿದ್ದಾರೆ.

ಪ್ರಚಾರದ ವೇಳೆಯೇ ಸಾಕಷ್ಟು ಹವಾ ಎಬ್ಬಿಸಿದ್ದ ನುಸ್ರತ್ ಜಹಾನ್ ಬಹಿರಂಗ ಪ್ರಚಾರ ಸಭೆ ವೇಳೆ ಸೆಲ್ಪಿಗಾಗಿ ಮುಗಬಿದ್ದ ಜನರಿಂದ ವೇದಿಕೆಯೇ ಕುಸಿದು ಬಿದ್ದು ಸುದ್ದಿಯಾಗಿತ್ತು.

ಕೋಲ್ಕತ್ತಾದ ಬೆಂಗಾಲಿ ಫ್ಯಾಮಿಲಿಯಲ್ಲಿ ಜನಿಸಿದ ನುಸ್ರತ್ ತಮ್ಮ 29 ನೇ ವಯಸ್ಸಿನಲ್ಲಿಯೇ ನಟಿ ಹಾಗೂ ಸಂಸದೆಯಾಗಿ ಬೆಳೆದುನಿಂತಿದ್ದು, ಆಕೆಯ ಕುಟುಂಬದ ಪಾಲಿಗೆ ಹೆಮ್ಮೆಯ ವಿಷಯ.

2010 ರಲ್ಲಿ ಮಿಸ್​ ಕೋಲ್ಕತ್ತಾ ಕೀರಿಟ ಧರಿಸಿದ್ದ ನುಸ್ರತ್​ ತಮ್ಮ ಮಾದಕ ಚೆಲುವು ಹಾಗೂ ವೇಷಭೂಷಣದಿಂದಲೇ ಹೆಸರು ಮಾಡಿದ್ದಾರೆ.

ಇದೀಗ ಇಂಥ ಹಾಟ್​ ಬೆಡಗಿ ಸಂಸದೆಯಾಗಿ ಆಯ್ಕೆಯಾಗಿರುವುದು ನೆಟ್ಟಿಗರ ಕುತೂಹಲ ಹಾಗೂ ಕಿಡಿಗೇಡಿತನಕ್ಕೆ ಕಾರಣವಾಗಿದ್ದು, ಆಕೆಯ ಹಾಟ್ ಹಾಟ್ ಪೋಟೋಗಳನ್ನು ಶೇರ್ ಮಾಡುವ ಮೂಲಕ ಕೆಲವರು ವ್ಯಂಗ್ಯವಾಡುತ್ತಿದ್ದಾರೆ.

ಇನ್ನು ಕೆಲವರು ಇಂಥಹ ಸಂಸದೆಯರ ಸಂಖ್ಯೆ ಸಂಸತ್ತಿನಲ್ಲಿ ಹೆಚ್ಚಿದರೇ, ಎಲ್ಲ ಅಧಿವೇಶನಗಳು ಹೌಸ್​ ಫುಲ್​ ಆಗಿ ನಡೆಯುತ್ತವೆ ಎಂದು ಕಾಲೆಳೆಯುತ್ತಿದ್ದಾರೆ.

Comments are closed.