ರಾಷ್ಟ್ರೀಯ

‘ನಿಮ್ಮ ಹಿಂಬಾಲಕರಿಂದ ನನ್ನ ಮಗಳ ಮೇಲೆ ಅತ್ಯಾಚಾರದ ಬೆದರಿಕೆ’; ಮೋದಿಗೆ ಟ್ವೀಟ್ ಮಾಡಿ ಆತಂಕ ವ್ಯಕ್ತಪಡಿಸಿದ ಅನುರಾಗ್ ಕಶ್ಯಪ್

Pinterest LinkedIn Tumblr

ಬಾಲಿವುಡ್ ಖ್ಯಾತ ನಿರ್ದೇಶಕರ ಅನುರಾಗ್ ಕಶ್ಯಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿ ನಿಮ್ಮ ಹಿಂಬಾಲಕರು ಎಂದು ಹೇಳಿಕೊಂಡು ತಿರುಗುತ್ತಿರುವ ಕೆಲ ವ್ಯಕ್ತಿಗಳು ನನ್ನ ಮಗಳನ್ನು ಅತ್ಯಾಚಾರ ಮಾಡುತ್ತೀವಿ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಚೌಕಿದಾರ್ ರಾಮ್ ಸಂಘಿ ಎಂಬಾಂತ ತಮ್ಮ ಟ್ವೀಟರ್ ಖಾತೆಯಲ್ಲಿ ಅನುರಾಗ್ ಕಶ್ಯಪ್ ಅವರ ಮಗಳ ಫೋಟೋವನ್ನು ಹಂಚಿಕೊಂಡಿದ್ದು ಈ ಫೋಟೋ ಕೆಳಗೆ ನಿಮ್ಮ ತಂದೆಗೆ ಹೇಳು. ಇನ್ನೊಮ್ಮೆ ಮೋದಿ ವಿರುದ್ಧವಾಗಿ ಮಾತನಾಡಿದರೆ ನಿನ್ನ ಮುಖವನ್ನು ಇನ್ಯಾರಿಗೂ ತೋರಿಸದಂತೆ ಮಾಡುತ್ತೇವೆ ಎಂದು ಬೆದರಿಸಿದ್ದಾರೆ. ಈ ಫೋಟೋವನ್ನು ಮೋದಿಗೆ ಅವರಿಗೆ ಟ್ಯಾಗ್ ಮಾಡಿ ಅನುರಾಗ್ ಆತಂಕ ವ್ಯಕ್ತಪಡಿಸಿದ್ದಾರೆ.

ಅನುರಾಗ್ ತಮ್ಮ ಟ್ವೀಟ್ ಖಾತೆಯಲ್ಲಿ ಡಿಯರ್ ನರೇಂದ್ರ ಮೋದಿ ಸರ್, ನೀವು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ಶುಭಾಶಯ. ನಿಮ್ಮ ಅನುಚರರು ಎಂದು ಹೇಳಿಕೊಂಡಿರುವ ಕೆಲವರು ನನ್ನ ಮಗಳಿಗೆ ಬೆದರಿಕೆಯೊಡ್ಡಿದ್ದಾರೆ. ನಾನು ನಿಮ್ಮ ವಿರೋಧಿ ಎಂದು ನನ್ನ ಮಗಳನ್ನು ಟಾರ್ಗೆಟ್ ಮಾಡಿದ್ದಾರೆ. ಇತಂಹವನ್ನು ಹೇಗೆ ಎದುರಿಸಬೇಕು ಎಂದು ತಿಳಿಸಿ ಪ್ಲೀಸ್ ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಸಂಬಂಧ ಅನುರಾಗ್ ಕಶ್ಯಪ್ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Comments are closed.