ರಾಷ್ಟ್ರೀಯ

ಬೆಂಕಿ ಅವಘಡಕ್ಕೆ 19 ವಿದ್ಯಾರ್ಥಿಗಳು ಬಲಿ!

Pinterest LinkedIn Tumblr


ಸೂರತ್​ (ಗುಜರಾತ್): ಇಲ್ಲಿನ ಸೂರತ್​ನ ಬಹುಮಹಡಿ ಕಟ್ಟಡದಲ್ಲಿ ನಡೆಯುತ್ತಿದ್ದ ತರಬೇತಿ ಕೇಂದ್ರದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಕನಿಷ್ಠ 19 ಮಂದಿ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಟ್ಟಡದೊಳಗೆ ಸಿಲುಕಿದ್ದ ವಿದ್ಯಾರ್ಥಿಗಳು ಪ್ರಾಣ ರಕ್ಷಣೆಗಾಗಿ ಕಟ್ಟದ ಮೇಲಿಂದ ಕೆಳಗೆ ಜಿಗಿಯುತ್ತಿದಿದ್ದಾರೆ. ಕಟ್ಟಡದ ಮೇಲಿಂದ ಜನರು ಹಾರುತ್ತಿರುವ ಭಯಾನಕ ದೃಶ್ಯಗಳು ಮೊಬೈಲ್​ಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೂಲಗಳ ಪ್ರಕಾರ, ಈ ಕಟ್ಟಡದಲ್ಲಿ ತರಬೇತಿ ಕೇಂದ್ರ ನಡೆಸಲಾಗುತ್ತಿತ್ತು. ಹಲವಾರು ವಿದ್ಯಾರ್ಥಿಗಳು ಕಟ್ಟಡದೊಳಗೆ ಇದ್ದರು. ಹಲವು ವಿದ್ಯಾರ್ಥಿಗಳು ಬೆಂಕಿ ಕಾಣಿಸಿಕೊಂಡ ನಂತರ ಕಟ್ಟಡದ ಮೇಲಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ 18 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ.

ಸೂರತ್​ನ ಸಾರ್ಥನಾ ನಗರದ ತಕ್ಷಶಿಲಾ ಸಂಕೀರ್ಣದ ಎರಡನೇ ಮಹಡಿಯಲ್ಲಿ ಇಂದು ಮಧ್ಯಾಹ್ನದ ನಂತರ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿ ಬೃಹದಾಕಾರದಲ್ಲಿ ಕಟ್ಟಡದ ತುಂಬಾ ವ್ಯಾಪಿಸಿದೆ. ಕಟ್ಟಡದಲ್ಲಿ ಸಿಲುಕಿದ್ದವರು ಪ್ರಾಣ ರಕ್ಷಣೆಗಾಗಿ ಮೇಲಿಂದ ಕೆಳಗೆ ಜಿಗಿದಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Comments are closed.