ರಾಷ್ಟ್ರೀಯ

ಕಾಶ್ಮೀರದಲ್ಲಿ ಭಾರತೀಯ ಸೈನಿಕ ಔರಂಗಜೇಬ್ ಹಂತಕನ ಹತ್ಯೆಗೈದ ಭದ್ರತಾ ಪಡೆ

Pinterest LinkedIn Tumblr


ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಭಾರತದ ಭದ್ರತಾ ಪಡೆಗಳು ಮೂವರು ಉಗ್ರಗಾಮಿಗಳನ್ನು ಹತ್ಯೆಗೈದಿದ್ದಾರೆ. ಕಳೆದ ವರ್ಷ ಕಾಶ್ಮೀರದ ಭಾರತೀಯ ಸೈನಿಕ ಔರಂಗಜೇಬ್ ಅವರನ್ನು ಕೊಂದುಹಾಕಿದ್ದ ಉಗ್ರರಲ್ಲಿ ಒಬ್ಬಾತ ಇವತ್ತಿನ ಎನ್​ಕೌಂಟರ್​​ನಲ್ಲಿ ಹತ್ಯೆಯಾಗಿದ್ದಾನೆ. ಆವಂತಿಪೋರಾದ ಪಣಜಗಮ್ ಪ್ರದೇಶದಲ್ಲಿ ಉಗ್ರರು ಇರುವ ಸುಳಿವು ಬೆನ್ನತ್ತಿ ಇವತ್ತು ಸೇನೆ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಗುಂಡಿನ ಕಾಳಗ ನಡೆದಿದೆ. ಈ ವೇಳೆ, ಓರ್ವ ಹಿಜ್ಬುಲ್ ಕಮಾಂಡರ್ ಸೇರಿ ಮೂವರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ಧಾರೆ. ಆದರೆ, ಭದ್ರತಾ ಪಡೆ ಯೋಧರಿಗೆ ಯಾವುದೇ ಹಾನಿಯಾದ ಮಾಹಿತಿ ಬಂದಿಲ್ಲ.

ಉಗ್ರು ಇದ್ದ ಸ್ಥಳದಲ್ಲಿ ಸಾಕಷ್ಟು ಶಸ್ತ್ರಾಸ್ತ್ರ ಉಗ್ರಾಣ ಪತ್ತೆಯಾಗಿದೆ. ಹಲವು ಆಯುಧಗಳನ್ನು ಯೋಧರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ವೈದ್ಯನಿಂದ 180 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ; ದಶಕಗಳ ನಂತರ ವಿಚಾರ ಬೆಳಕಿಗೆ

ಎರಡು ದಿನಗಳ ಹಿಂದೆ ಇದೇ ಪುಲ್ವಾಮ ಜಿಲ್ಲೆಯ ದಾಲಿಪುರ ಎಂಬಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿ ಘಟನೆಯಲ್ಲಿ 9 ಜನರು ಬಲಿಯಾಗಿದ್ದರು. ಇದರಲ್ಲಿ ಐವರು ಉಗ್ರರು, ಇಬ್ಬರು ಸೈನಿಕರು ಮತ್ತು ಇಬ್ಬರು ನಾಗರಿಕರೂ ಒಳಗೊಂಡಿದ್ದರು.

Comments are closed.