ರಾಷ್ಟ್ರೀಯ

ಇಶ್ರತ್ ಜಹಾನ್ ‘ನಕಲಿ’ ಎನ್‌ಕೌಂಟರ್ ಪ್ರಕರಣ: ಪೊಲೀಸ್ ಅಧಿಕಾರಿಗಳಾದ ವಂಜಾರಾ, ಅಮಿನ್ ವಿರುದ್ಧ ಆರೋಪ ಕೈಬಿಟ್ಟ ಸಿಬಿಐ ಕೋರ್ಟ್!

Pinterest LinkedIn Tumblr

ನವದೆಹಲಿ: 2004ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯಲು ಬಯಸಿದ್ದ ಲಷ್ಕರ್ ಉಗ್ರರು ಎಂದು ಆರೋಪಿಸಲಾಗಿದ್ದ ಇಶ್ರತ್ ಜಹಾನ್ ಸೇರಿದಂತೆ ಮೂವರನ್ನು ಗುಜರಾತ್ ಪೊಲೀಸರು ಎನ್ ಕೌಂಟರ್ ಮಾಡಿದ್ದು ಈ ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಗಳಾದ ಡಿಜಿ ವಂಜಾರಾ ಮತ್ತು ಅಮಿನ್ ಅವರನ್ನು ಸಿಬಿಐ ಕೋರ್ಟ್ ಖುಲಾಸೆಗೊಳಿಸಿದೆ.

ವಂಜಾರಾ ಮತ್ತು ಅಮಿನ್ ಅವರು ಪ್ರಕರಣದಿಂದ ತಮ್ಮ ಹೆಸರನ್ನು ಕೈಬಿಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸುವ ಮೂಲಕ ಇಬ್ಬರೂ ಅಧಿಕಾರಿಗಳನ್ನು ಪ್ರಕರಣದಿಂದ ಆರೋಪ ಮುಕ್ತಗೊಳಿಸಿದೆ.

ಇಶ್ರತ್ ಜಹಾನ್ ಎನ್‌ಕೌಂಟರ್ ಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪ್ರಾಸಿಕ್ಯೂಶನ್ ನೇಮಕ ಮಾಡದಿರುವ ಗುಜರಾತ್ ಸರ್ಕಾರದ ನಿರ್ಧಾರದ ಬಳಿಕ ವಂಜಾರಾ ಮತ್ತು ಅಮಿನ್ ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Comments are closed.