ರಾಷ್ಟ್ರೀಯ

ರಾಯ್‌ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ; ವಿಶೇಷ ಪೂಜೆ

Pinterest LinkedIn Tumblr


ರಾಯ್‌ಬರೇಲಿ : ಸೋನಿಯಾ ಗಾಂಧಿ ಅವರು ಕಣಕ್ಕಿಳಿದಿರುವ ಪ್ರತಿಷ್ಠಿತ ಕ್ಷೇತ್ರದಲ್ಲಿ ಯುವ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದು, ಬಹರಾಮ್‌ಪುರ್‌ನ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಉತ್ತರಪ್ರದೇಶದಲ್ಲಿ ಬಿಜೆಪಿ ಹೀನಾಯವಾಗಿ ಸೋಲುತ್ತದೆ. ಈ ಬಾರಿ ಕಾಂಗ್ರೆಸ್‌ ಪ್ರಭಾವವಿರುವಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಹೋರಾಟವಿದೆ. ನಮ್ಮ ಅಭ್ಯರ್ಥಿಗಳು ಬಿಜೆಪಿಯ ಮತಗಳನ್ನು ಕಸಿಯುವಷ್ಟು ಸಮರ್ಥರಿದ್ದಾರೆ ಎಂದರು.

ಪ್ರಿಯಾಂಕಾ ಗಾಂಧಿ ರಾಹುಲ್‌ ಗಾಂಧಿ ಅವರು ಪುನರಾಯ್ಕೆ ಬಯಸಿರುವ ಅಮೇಥಿಯಲ್ಲೂ ಭರ್ಜರಿ ಪ್ರಚಾರ ನಡೆಸಿದ್ದರು.

ರಾಯ್‌ಬರೇಲಿಯಲ್ಲೂ ದೇವಾಲಯಗಳು , ಸಾಮಾನ್ಯರೊಂದಿಗೆ ಬೆರೆತು ತಾಯಿಗೆ ಇನ್ನೊಮ್ಮೆ ಗೆಲವು ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ.

Comments are closed.