ಕರ್ನಾಟಕ

ಜಾತ್ಯಾತೀತ ಪಕ್ಷಕ್ಕೆ ಮತ ಚಲಾಯಿಸಿದ್ದರೆ ದಕ್ಷಿಣ ಕನ್ನಡ ಪ್ರಥಮ ಬರುತ್ತಿತ್ತು: ಎಸ್‌ಎಸ್‌ಎಲ್‌ಸಿ ಫ‌ಲಿತಾಂಶದ ವಿಚಾರದಲ್ಲಿ ಸಚಿವ ರೇವಣ್ಣ ವ್ಯಂಗ್ಯ

Pinterest LinkedIn Tumblr
H D Revanna m

ಹಾಸನ: ಬಿಜೆಪಿಗೆ ಮತ ಹಾಕದೆ ಜಾತ್ಯಾತೀತ ಪಕ್ಷಕ್ಕೆ ಮತ ಹಾಕಿದ್ದರೆ ದಕ್ಷಿಣ ಕನ್ನಡ ಎಸ್‌ಎಸ್‌ಎಲ್‌ಸಿ ಫ‌ಲಿತಾಂಶದಲ್ಲಿ ಪ್ರಥಮ ಬರುತ್ತಿತ್ತು ಎಂದು ಸಚಿವ ಎಚ್‌.ಡಿ ರೇವಣ್ಣ ವ್ಯಂಗ್ಯವಾಡಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇವಣ್ಣ ಈ ಹೇಳಿಕೆ ನೀಡಿದ್ದಾರೆ. ಹಾಸನ ಮೊದಲ ಸ್ಥಾನ ಪಡೆದಿದೆ,ರಾಮನಗರ ದ್ವಿತೀಯ ಸ್ಥಾನ ಪಡೆದಿದೆ. ಇದರಲ್ಲಿ ದೇವೇಗೌಡರ ಪಾತ್ರವೂ ಇದೆ. ನನ್ನ ಪತ್ನಿ ಭವಾನಿಯ ಪಾತ್ರವೂ ಇದೆ. ರೋಹಿಣಿ ಸಿಂಧೂರಿ ಅವರ ಕೊಡುಗೆ ಏನೂ ಇಲ್ಲ. ನಾನು ಸಚಿವನಾದ ಬಳಿಕ ಎರಡು ಮೀಟಿಂಗ್‌ಗಳನ್ನು ಕರೆದಿದ್ದೆ ಎಂದರು.

ನಟ ದರ್ಶನ್‌ಗೂ ಟಾಂಗ್‌ ನೀಡಿದ ರೇವಣ್ಣ, ರೈತರ ಕಷ್ಟ ನಟರಿಗೇನು ಗೊತ್ತು. ಅವರು ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ, ಅದರ ಅರ್ಧ ರೈತರಿಗೆ ನೀಡಲಿ ಎಂದರು.

ಟ್ರೋಲ್‌ ಆಗಿದ್ದ ರೇವಣ್ಣ
ಹಾಸನ ಫ‌ಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದ ಬಳಿಕ ಸಚಿವ ರೇವಣ್ಣ ಅವರ ಲಿಂಬೆ ಹಣ್ಣಿನ ಪ್ರಭಾವದಿಂದ ಎಂದು ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಟ್ರೋಲ್‌ ಆಗಿತ್ತು.

Comments are closed.