ರಾಷ್ಟ್ರೀಯ

‘ನನಗಂತೂ ದೇಶದಲ್ಲಿ ಯಾವುದೇ ಮೋದಿ ಅಲೆ ಕಾಣುತ್ತಿಲ್ಲ’: ಕಾಂಗ್ರೆಸ್’ನಿಂದ ಸ್ಪರ್ಧೆಗಿಳಿದಿರುವ ಬಾಕ್ಸರ್ ವಿಜೇಂದರ್ ಸಿಂಗ್

Pinterest LinkedIn Tumblr

ನವದೆಹಲಿ: ಒಲಂಪಿಕ್ ಪದಕ ವಿಜೇತ ಹಾಗೂ ಖ್ಯಾತ ಬಾಕ್ಸರ್ ವಿಜೇಂದರ್‌ ಸಿಂಗ್‌ ಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ವಿಜೇಂದರ್ ಸಿಂಗ್ ದೆಹಲಿ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಇಂದು ತಮ್ಮ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ್ದ ಭಾರತದ ಮೊದಲ ಬಾಕ್ಸರ್ ಆಗಿದ್ದ ವಿಜೇಂದರ್ ಸಿಂಗ್ ರಾಷ್ಟ್ರರಾಜಧಾನಿಯ ದಕ್ಷಿಣ ದಿಲ್ಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಹೆಸರಿರುವ ಏಳನೇ ಅಭ್ಯರ್ಥಿ ವಿಜೇಂದರ್ ಸಿಂಗ್. ಸೋಮವಾರ ಆರು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿತ್ತು.

ತನಗೆ ಅವಕಾಶ ನೀಡಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರಿಗೆ ಕೃತಜ್ಞತೆ ಸಲ್ಲಿಸುವೆ. 20 ವರ್ಷಗಳ ಬಾಕ್ಸಿಂಗ್ ವೃತ್ತಿಜೀವನದಲ್ಲಿ ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡಿದ್ದೇನೆ. ಇದೀಗ ನನ್ನ ದೇಶದಲ್ಲಿ ಸೇವೆ ಮಾಡುವ ಅವಕಾಶ ಲಭಿಸಿದೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

ಅಂತೆಯೇ ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಜೇಂದರ್ ಸಿಂಗ್, ನನಗಂತೂ ದೇಶದಲ್ಲಿ ಯಾವುದೇ ಮೋದಿ ಅಲೆ ಕಾಣುತ್ತಿಲ್ಲ. ‘ಕಳೆದ ಐದು ವರ್ಷದಲ್ಲಿ ಜನರು ಎಲ್ಲವನ್ನೂ ನೋಡಿದ್ದಾರೆ, ಅವರ ನಿಜವಾದ ಮುಖದ ಅರಿವು ಜನರಿಗೆ ಆಗಿದೆ. ಹೀಗಾಗಿ ಈ ಬಾರಿ ಜನ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ ಎಂದು ವಿಜೇಂದರ್ ಸಿಂಗ್ ಹೇಳಿದ್ದಾರೆ.

ಇದೇ ವೇಳೆ ತಮಗೆ ಟಿಕೆಟ್ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ಹೇಳಿರುವ ವಿಜೇಂದರ್ ಸಿಂಗ್, ಈಗ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಬಡವರ ಸಂಕಷ್ಟ ನನಗೆ ಅರ್ಥವಾಗುತ್ತದೆ. ನಾನು ಕೂಡ ಓರ್ವ ಚಾಲಕನ ಮಗ. ತುಂಬಾ ಕಷ್ಟದಿಂದ ಬಂದಿದ್ದೇವೆ. ಹೀಗಾಗಿ ಬಡವರ ಸಂಕಷ್ಟಗಳನ್ನು ನಾನು ಅರ್ಥೈಸಿಕೊಳ್ಳಬಲ್ಲ ಎಂದು ಹೇಳಿದ್ದಾರೆ.

ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಅವರಿಗೆ ದಕ್ಷಿಣ ದೆಹಲಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದ್ದು, ವಿಜೇಂದರ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಕ್ಷೇತ್ರಕ್ಕೆ ಇನ್ನೋರ್ವ ಬಾಕ್ಸರ್ ಸುಶೀಲ್ ಕುಮಾರ್ ಹೆಸರೂ ಕೂಡ ಕೇಳಿಬಂದಿತ್ತು. ಕಾಂಗ್ರೆಸ್ ಕೇಂದ್ರ ಸಮಿತಿಗೆ ಸುಶೀಲ್ ಹೆಸರನ್ನೇ ಶಿಫಾರಸ್ಸು ಮಾಡಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ಬದಲಾಯಿಸಿ ವಿಜೇಂದರ್ ಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.

ಒಲಂಪಿಕ್ ಪದಕ ವಿಜೇತರಾಗಿರುವ ವಿಜೇಂದರ್ ವಿಶ್ವ ವ್ರೆಸ್ಲಿಂಗ್ ಲೀಗ್‌ನಲ್ಲಿ ಭಾಗವಹಿಸಿದ ಭಾರತದ ಮೊದಲ ಕ್ರೀಡಾಪಟು ಎಂಬ ಖ್ಯಾತಿಯನ್ನೂ ಹೊಂದಿದ್ದಾರೆ. ಭಾರತದಲ್ಲಿ ಬಾಕ್ಸಿಂಗ್ ಹೆಚ್ಚು ಜನಪ್ರಿಯ ಕ್ರೀಡೆಯಾಗಲು ಮಹತ್ವದ ಕೊಡುಗೆ ನೀಡಿರುವ ಸಿಂಗ್‌ಗೆ 2010ರಲ್ಲಿ ದೇಶದ ಮೂರನೇ ಉನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.

Comments are closed.