ರಾಷ್ಟ್ರೀಯ

ಕುತೂಹಲ ಕೆರಳಿಸಿದ ನಟ ಸನ್ನಿ ಡಿಯೋಲ್- ಅಮಿತ್ ಶಾ ಭೇಟಿ; ಪಂಜಾಬ್’ನ ಅಮೃತಸರದಿಂದ ಸ್ಪರ್ಧೆ !

Pinterest LinkedIn Tumblr

ನವದೆಹಲಿ: ಖ್ಯಾತ ಬಾಲಿವುಡ್ ನಟ ಸನ್ನಿ ಡಿಯೋಲ್ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಈ ಭೇಟಿ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.

ಮೂಲಗಳ ಪ್ರಕಾರ ಹಾಲಿ ಲೋಕಸಭಾ ಚುನಾವಣೆಯಲ್ಲಿ ಸನ್ನಿ ಡಿಯೋಲ್ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಂತೆಯೇ ಬಿಜೆಪಿ ಮೂಲಗಳು ತಿಳಿಸಿರುವಂತೆ ಅವರು ಪಂಜಾಬ್ ನ ಅಮೃತಸರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಕುರಿತು ಅಮಿತ್ ಶಾರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಬಾಲಿವುಡ್ ನ ದಿಗ್ಗಜ ಕುಟುಂಬ ಧರ್ಮೇಂದ್ರ ಕುಟುಂಬದಿಂದ ಈಗಾಗಲೇ ಧರ್ಮೇಂದ್ರ ಅವರ ಧರ್ಮ ಪತ್ನಿ ಹೇಮಾಮಾಲಿನಿ ಬಿಜೆಪಿ ಸಂಸದರಾಗಿದ್ದು, ಮಥುರಾದಿಂದ ಮತ್ತೆ ಈ ಬಾರಿ ಆಯ್ಕೆ ಬಯಸಿದ್ದಾರೆ. ಇನ್ನು ಒಂದು ವೇಳೆ ಸನ್ನಿ ಡಿಯೋಲ್ ಗೆ ಬಿಜೆಪಿ ಮಣೆ ಹಾಕಿದ್ದೇ ಆದರೆ ಆಗ ಧರ್ಮೇಂದ್ರ ಕುಟುಂಬದಿಂದ ಮತ್ತೊಬ್ಬರಿಗೆ ಬಿಜೆಪಿ ಟಿಕೆಟ್ ನೀಡಿದಂತಾಗುತ್ತದೆ.

ರಾಜಕೀಯವೇನಿಲ್ಲ, ಸಾಮಾನ್ಯ ಭೇಟಿ ಎಂದು ಸನ್ನಿ ಡಿಯೋಲ್ ಸ್ಪಷ್ಟನೆ
ಇನ್ನು ಭೇಟಿ ಬಳಿಕ ಮಾಧ್ಯಮಗಳಲ್ಲಿ ಉದ್ಭವವಾಗಿರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿರುವ ನಟ ಸನ್ನಿ ಡಿಯೋಲ್, ಇದೊಂದು ಸಾಮಾನ್ಯ ಭೇಟಿಯಷ್ಟೇ. ಇಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ ಎಂದು ಸನ್ನಿ ಡಿಯೋಲ್ ಸ್ಪಷ್ಟ ಪಡಿಸಿದ್ದಾರೆ.

Comments are closed.