ರಾಷ್ಟ್ರೀಯ

ಭಾರತೀಯರೇ ಕೂಡಲೇ ಲಿಬಿಯಾದಿಂದ ಹೊರ ಬನ್ನಿ: ಸುಷ್ಮಾ ಸ್ವರಾಜ್ ಸೂಚನೆ

Pinterest LinkedIn Tumblr


ನವದೆಹಲಿ: ಲಿಬಿಯಾದಲ್ಲಿ ಪರಿಸ್ಥಿತಿ ಕ್ಷಣದಿಂದ ಕ್ಷಣಕ್ಕೆ ಬಿಗಡಾಯಿಸುತ್ತಿದೆ. ಲಿಬಿಯಾದ ರಾಜಧಾನಿ ಟ್ರಿಪೋಲಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಭಾರತೀಯರಿದ್ದಾರೆ. ಕೂಡಲೇ ಲಿಬಿಯಾದಿಂದ ಹೊರ ಬನ್ನಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಲಿಬಿಯಾ ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ಬದಲಾದಲ್ಲಿ ಸಂಚಾರವನ್ನು ನಿಷೇಧಿಸುವ ಸಾಧ್ಯತೆಗಳಿವೆ. ಸದ್ಯ ಸಂಚಾರ ಮುಕ್ತವಾಗಿದ್ದು, ಟ್ರಿಪೋಲಿ ನಗರದಿಂದ ಹೊರ ಬನ್ನಿ. ಒಂದು ವೇಳೆ ಪರಿಸ್ಥಿತಿ ಕೈ ಮೀರಿದರೆ ಅಲ್ಲಿರುವ ಭಾರತೀಯರನ್ನು ಸ್ಥಳಾಂತರಿಸೋದು ಕಷ್ಟ. ಲಿಬಿಯಾದಲ್ಲಿರುವ ನಿಮ್ಮ ಗೆಳೆಯ ಅಥವಾ ಕುಟುಂಬಸ್ಥರನ್ನು ಸಂಪರ್ಕಿಸಿ ಎಂದು ಇಲ್ಲಿಯ ಭಾರತೀಯರಿಗೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಲಿಬಿಯಾದ ರಾಜಧಾನಿ ಟ್ರಿಪೋಲಿಯನ್ನು ವಶಕ್ಕೆ ಪಡೆದುಕೊಳ್ಳಲು ಎರಡು ಸೇನೆಗಳ ನಡುವೆ ಸಂಘರ್ಷ ಆರಂಭಗೊಂಡಿದೆ. ಫೀಲ್ಡ್ ಮಾರ್ಷಲ್ ಖಲೀಫಾ ಹೋಫ್ತಾರ್ ನೇತೃತ್ವದ ಸೆಲ್ಫ್-ಸ್ಟೈಲ್ಡ್ ಲಿಬಿಯಾನ್ ನ್ಯಾಷನಲ್ ಆರ್ಮಿ ಏಪ್ರಿಲ್ 4ರಿಂದ ಟ್ರಿಪೋಲಿ ಮೇಲೆ ದಾಳಿ ನಡೆಸುತ್ತಿದೆ. ಇದೇ ಸ್ಥಿತಿ ಮುಂದುವರೆದರೆ ಯುದ್ಧಗಳು ನಡೆಯುವ ಸಾಧ್ಯತೆಗಳಿವೆ. ಇದೂವರೆಗೂ ಈ ದಾಳಿಯಲ್ಲಿ 205 ಜನರು ಸಾವನ್ನಪ್ಪಿದ್ದು, 900 ಜನರು ಗಾಯಗೊಂಡಿದ್ದಾರೆ.

Comments are closed.