ರಾಷ್ಟ್ರೀಯ

ಜೈಲಿನ ಕಿರುಕುಳ ಬಿಚ್ಚಿಟ್ಟು ಕಣ್ಣೀರಿಟ್ಟ ಸಾಧ್ವಿ ಪ್ರಜ್ಞಾಸಿಂಗ್

Pinterest LinkedIn Tumblr


ಭೋಪಾಲ್: ಮಧ್ಯ ಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರು ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾರೆ. ಹಿಂದೂ ಭಯೋತ್ಪಾದಕರಿಗೆ ಟಿಕೆಟ್ ನೀಡಿದ್ದು ಸರಿಯಲ್ಲ ಎಂದು ವಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದವು. ಈ ಬೆನ್ನಲ್ಲೆ ಸಾಧ್ವಿ ಪ್ರಜ್ಞಾಸಿಂಗ್ ಅವರು ಮಾಲೇಗಾಂವ್ ಸ್ಫೋಟ ಪ್ರಕರಣ ನೆನೆದು ಕಣ್ಣೀರಿಟ್ಟಿದ್ದಾರೆ.

ಮಾಲೇಗಾಂವ್ ಪ್ರಕರಣದಲ್ಲಿ ಮುಸ್ಲಿಮರನ್ನು ಹತ್ಯೆ ಮಾಡುವುದಕ್ಕಾಗಿಯೇ ಸ್ಫೋಟ ನಡೆಸಿದೆ ಅಂತ ತಪ್ಪೊಪ್ಪಿಕೊಳ್ಳಬೇಕು ಎಂದು ಜೈಲು ಅಧಿಕಾರಿಗಳು ಒತ್ತಾಯಿಸಿ ಕಿರುಕುಳ ನೀಡಿದ್ದರು. ವಿಚಾರಣೆ ಸಂಬಂಧ ಅಕ್ರಮವಾಗಿ ಬಂಧಿಸಿದ ಪೊಲೀಸರು, ನನಗೆ ಮುಳ್ಳಿನ ಬೆಲ್ಟ್‍ನಿಂದ ಹೊಡೆದರು. ಅಸಭ್ಯ ಭಾಷೆಯಲ್ಲಿ ಬೈದರು. ಅಷ್ಟೇ ಅಲ್ಲದೆ ಬಟ್ಟೆ ಕಳಚಿ ನಗ್ನಗೊಳಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಸಾಧ್ವಿ ಪ್ರಜ್ಞಾಸಿಂಗ್ ದೂರಿದರು.

ನನ್ನನ್ನು 13 ದಿನಗಳ ಕಾಲ ಅಕ್ರಮವಾಗಿ ಬಂಧಿಸಿ ಇಡಲಾಗಿತ್ತು. ಬಂಧಿಸಿದ ಮೊದಲ ದಿನವೇ ನನ್ನ ಮೇಲೆ ಹಲ್ಲೆ ಮಾಡಲು ಆರಂಭಿಸಿದರು. ಬಳಿಕ ಹಗಲು ರಾತ್ರಿ ಎನ್ನದೇ ನನ್ನನ್ನು ಹೊಡೆಯುತ್ತಿದ್ದರು. ನನ್ನ ಕೈಯಲ್ಲಿ ರಕ್ತ ಬಂದರೂ ಎಂದು ಅವರು ಹೊಡೆಯುವುದನ್ನು ನಿಲ್ಲಿಸಿದರು. ಬಳಿಕ ಬಿಸಿ ನೀರು ತಂದು ಅದರಲ್ಲಿ ಉಪ್ಪು ಬೆರೆಸಿ ಕೈಗಳನ್ನು ಇರಿಸಿದರು. ಸ್ವಲ್ಪ ಗುಣಮುಖವಾಗುತ್ತಿದ್ದಂತೆ ಮತ್ತೆ ಹೊಡೆಯಲು ಆರಂಭಿಸಿದರು ಎಂದು ಜೈಲಿನಲ್ಲಿ ಕೊಟ್ಟ ಶಿಕ್ಷೆಯನ್ನು ನೆನೆದರು.

ಏನಿದು ಪ್ರಕರಣ?:
ಮಹಾರಾಷ್ಟ್ರದ ಮಾಲೇಗಾಂವ್‍ನಲ್ಲಿ 20008ರ ಸೆಪ್ಟೆಂಬರ್ ನಲ್ಲಿ ಸ್ಫೋಟ ನಡೆದಿತ್ತು. ಈ ವೇಳೆ 7 ಜನರು ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸಂಬಂಧ ಉಗ್ರ ನಿಗ್ರಹ ದಳವು ಕಣ್ಣೀರಿಟ್ಟ ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಬಂಧಿಸಿತ್ತು. ಈ ಪ್ರಕರಣದ ಕುರಿತು 2011ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ತನಿಖೆ ಆರಂಭಿಸಿತ್ತು. ಪ್ರಜ್ಞಾ ವಿರುದ್ಧ ಯಾವುದೇ ಸಾಕ್ಷಿಗಳು ಇಲ್ಲದೇ ಇರುವುದರಿಂದ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಕ್ಲೀನ್ ಚಿಟ್ ನೀಡಿತ್ತು.

Comments are closed.