ಕ್ರೀಡೆ

ಆಸೀಸ್ ಆಟಗಾರ್ತಿಯನ್ನ ಸಲಿಂಗಿ ಮದುವೆಯಾದ ಕಿವೀಸ್ ಆಟಗಾರ್ತಿ

Pinterest LinkedIn Tumblr


ಸಿಡ್ನಿ: ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹೇಯ್ಲೆ ಜೆನ್ಸನ್, ಆಸೀಸ್ ತಂಡದ ನಿಕೋಲಾ ಹ್ಯಾಂಕಾಕ್ ರನ್ನು ಸಲಿಂಗಿ ಮದುವೆಯಾಗಿದ್ದಾರೆ.

ಜೆನ್ಸನ್ ಆಸ್ಟ್ರೇಲಿಯಾದ ಮೆಲ್ಬರ್ನ್ ಸ್ಟಾರ್ ತಂಡದ ಪರ ಬಿಗ್ ಬ್ಯಾಶ್ ಟೂರ್ನಿಯಲ್ಲಿ ಭಾಗವಹಿಸಿದ್ದರು. ಇತ್ತ ಇದೇ ತಂಡದಲ್ಲಿ ಆಡುತ್ತಿದ್ದ ನಿಕೋಲಾ ನಡುವೆ ಪ್ರೇಮಾಂಕುರವಾಗಿ ಒಂದು ವಾರದ ಹಿಂದೆಯಷ್ಟೇ ಮದುವೆಯಾಗಿದ್ದಾರೆ. ಆದರು ನಿಕೋಲಾ ಅವರು ಮೆಲ್ಬರ್ನ್ ತಂಡದ ಪರವೇ ಕ್ರಿಕೆಟ್ ಮುಂದುವರಿಸಲಿದ್ದು, ಆಸೀಸ್ ಪರ ಪಾರ್ದಾಪಣೆ ಮಾಡಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಇತ್ತ ಜೆನ್ಸನ್ ನ್ಯೂಜಿಲೆಂಡ್ ತಂಡದ ಪರ 2014 ರಲ್ಲಿ ಪಾದಾರ್ಪಣೆ ಮಾಡಿದ್ದರು. ಸದ್ಯ ಇಬ್ಬರ ಮದುವೆ ಕುರಿತಂತೆ ಮೆಲ್ಬರ್ನ್ ಕ್ರಿಕೆಟ್ ಕ್ಲಬ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇಬ್ಬರ ಮದುವೆ ಸಮಾರಂಭದ ಫೋಟೋ ಟ್ವೀಟ್ ಮಾಡಿ ಶುಭಕೋರಿದೆ.

ಅಂದಹಾಗೇ 2013 ಆಗಸ್ಟ್ 19 ರಿಂದ ನ್ಯೂಜಿಲೆಂಡ್‍ನಲ್ಲಿ ಸಲಿಂಗಿ ಮದುವೆಗೆ ಅವಕಾಶ ಕಾನೂನಿನ ಅಡಿ ಮಾನ್ಯತೆ ನೀಡಲಾಗಿದೆ. ನ್ಯೂಜಿಲೆಂಡ್ ಸಂಸತ್ ನಲ್ಲಿ ಸಲಿಂಗಿ ಮದುವೆಗೆ ಮಾನ್ಯತೆ ನೀಡುವ ಮದುವೆಯ ಬಿಲ್ ಪ್ರವೇಶಪಡಿಸಿದ ಸಂದರ್ಭದಲ್ಲಿ ಅಂದರೆ 2013 ಏಪ್ರಿಲ್ ರಂದು 77 ಮತಗಳಲ್ಲಿ 44 ಮತಗಳು ಪರವಾಗಿ ಲಭಿಸಿತ್ತು. ಪರಿಣಾಮ ಏಪ್ರಿಲ್ 19ಕ್ಕೆ ಕಾಯ್ದೆ ಜಾರಿಗೆ ಬಂತು.

2018 ರಲ್ಲಿ ದಕ್ಷಿಣ ಆಫ್ರಿಕಾ ಅಂತರಾಷ್ಟ್ರೀಯಾ ಆಟಗಾರ್ತಿರಾದ ಡೇನ್ ವ್ಯಾನ್ ನಿಕೆರ್ಕ್, ಮರಿಝೂನ್ ಕಾಪ್ ಸಲಿಂಗಿ ಮದುವೆಯಾಗಿದ್ದರು. ಅಲ್ಲದೇ ನ್ಯೂಜಿಲೆಂಡ್ ತಂಡದ ಮಹಿಳಾ ತಂಡದ ಆಮಿ ಸಟರ್ತೈಟ್ ಹಾಗೂ ಲೀ ಟಾಹುಹು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Comments are closed.