ರಾಷ್ಟ್ರೀಯ

ಬಿಹಾರದ ಆರ್​ಜಿಡಿ ನಾಯಕರಾದ ರಾಬ್ರಿ ದೇವಿ, ತೇಜಸ್ವಿ ಯಾದವ್​ ಅವರೊಂದಿಗೆ ಜೋಶಿ ಸಂದರ್ಶನ

Pinterest LinkedIn Tumblr


ನವದೆಹಲಿ: ದೇಶದಲ್ಲಿ ಹಲವೆಡೆ ಕಾಂಗ್ರೆಸ್​ ಹೊರತುಪಡಿಸಿ ಮಹಾಘಟಬಂಧನ್ ಆಗಿದೆ. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿ ಸಾಧ್ಯವಾಗಿಲ್ಲ. ಚುನಾವಣಾಪೂರ್ವ ಮೈತ್ರಿ ಆಗಿದಿದ್ದರೂ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ನ್ಯೂಸ್ 18 ಎಡಿಟರ್​ ಇನ್ ಚೀಫ್​ ರಾಹುಲ್​ ಜೋಶಿ ಜೊತೆ ಸಂದರ್ಶನದಲ್ಲಿ ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್ ಮತ್ತು ರಾಬ್ರಿ ದೇವಿ ಹೇಳಿದ್ದಾರೆ. ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದು, ಅವರ ಸಾರಾಂಶ ಹೀಗಿದೆ.

ಈಗ ಎಲ್ಲರೂ ಒಂದು ಕಡೆ ಬಂದಿದ್ದೇವೆ. ಎಲ್ಲರೂ ಒಂದು ಕಡೆ ಸೇರುವ ಅಗತ್ಯ ಬಂದಿದೆ. ಈಗಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್​ಪಿ ಮತ್ತು ಸಮಾಜವಾದಿ (ಎಸ್​ಪಿ) ಮೈತ್ರಿ ಕನಸ್ಸಲ್ಲೂ ಕಾಣಬಹುದು. ಜಾರ್ಖಂಡ್​ನಲ್ಲೂ ಈಗ ಘಟಬಂಧನ್​ ಆಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿ ಸಾಧ್ಯವಾಗಿಲ್ಲ. ಆದರೂ ನಾವು ಪ್ರಯತ್ನ ಪಡುತ್ತಾ ಇದ್ದೇವೆ. ಚುನಾವಣಾ ಪೂರ್ವ ಮೈತ್ರಿ ಆಗದಿದ್ದರೆ, ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುತ್ತೇವೆ. ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದ್ದರೆ ಮಾಡಿಕೊಳ್ಳುತ್ತೇವೆ. ರಾಜ್ಯದ ಎಲ್ಲಾ ವಿರೋಧ ಪಕ್ಷಗಳೆಲ್ಲಾ ಒಂದಾಗಬೇಕಲ್ವಾ? ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಂಕಷ್ಟ ಎದುರಾಗಿದೆ. ಬಿಹಾರ, ಜಾರ್ಖಂಡ್​​ನಲ್ಲೂ ಅದೇ ಆಗಿದೆ ಎಂದು ಆರ್​ಜೆಡಿ ಮುಖಂಡರು ಹೇಳಿದ್ದಾರೆ.

Comments are closed.