ರಾಷ್ಟ್ರೀಯ

ಈಗ ಹಿಟ್ಲರ್​ ಬದುಕಿದ್ದಿದ್ದರೆ ಮೋದಿ ಕೆಲಸ ನೋಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ!’: ಮಮತಾ ಬ್ಯಾನರ್ಜಿ

Pinterest LinkedIn Tumblr


ರೈಗುಂಜ್​ (ಪಶ್ಚಿಮ ಬಂಗಾಳ): ಏಳು ಹಂತದಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು 48 ಗಂಟೆ ಬಾಕಿ ಇದೆ. ಏಳೂ ಹಂತಗಳಲ್ಲೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನ ಇಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ವಿರುದ್ಧ ತೀವ್ರ ಗಂಭೀರ ಸ್ವರೂಪ ಆರೋಪಗಳನ್ನು ಮಾಡಿದ್ದಾರೆ.

“ರಾಜಕೀಯವಾಗಿ ಅವರು ದೊಂಬಿ ಗಲಭೆಗಳನ್ನು ಮಾಡಿಸಿದ್ದಾರೆ. ಅವರು ನಿರಂಕುಶವಾದಿಗಳ ರಾಜ. ಒಂದು ವೇಳೆ ಅಡಾಲ್ಫ್​ ಹಿಟ್ಲರ್ ಬದುಕಿದಿದ್ದರೆ ಮೋದಿಯ ಚಟುವಟಿಕೆ ನೋಡಿ ಆತನೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ,” ಎಂದು ಮಮತಾ ಬ್ಯಾನರ್ಜಿ ಆರೋಪ ಮಾಡಿದರು.

ರೈಗುಂಜ್​ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಬ್ಯಾನರ್ಜಿ, “ವಿರೋಧ ಪಕ್ಷಗಳನ್ನು ಮುಗಿಸಲು ಪ್ರಧಾನಿ ಮೋದಿ ಮತ್ತು ಅವರ ಪಕ್ಷ ಕೇಂದ್ರದ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ,” ಎಂದು ಆರೋಪಿಸಿದರು.

“ಮೋದಿ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ತಮ್ಮ ಬಗ್ಗೆ ಅವರೇ ಸಿನಿಮಾ ಮಾಡಿಕೊಂಡಿದ್ದಾರೆ. ಆದರೆ, ನೆನಪಿನಲ್ಲಿ ಇಟ್ಟುಕೊಳ್ಳಿ, ಅವರು ಗಲಭೆಗಳನ್ನು ಸೃಷ್ಟಿಸಿದ್ದಾರೆ. ಗುಜರಾತ್​ನ ಯಾರೊಬ್ಬರು ಅದನ್ನು ಮರೆಯುವುದಿಲ್ಲ,” ಎಂದು ಬ್ಯಾನರ್ಜಿ ಹೇಳಿದರು.

ರಾಷ್ಟ್ರೀಯ ನೋಂದಣಿ ನಾಗರಿಕರು (ಎನ್​ಆರ್​ಸಿ) ವಿಚಾರವಾಗಿ ಮಾತನಾಡಿದ ಬ್ಯಾನರ್ಜಿ, “ಪಶ್ಚಿಮಬಂಗಾಳದಲ್ಲಿ ಎನ್​ಆರ್​ಸಿ ಜಾರಿಗೊಳಿಸುವ ಧೈರ್ಯವನ್ನು ತೋರುತ್ತಿದೆ. ಅದನ್ನು ಮಾಡುವ ಪ್ರಯತ್ನವನ್ನು ಅವರು ಮಾಡಲಿ. ಆನಂತರ ಏನಾಗುತ್ತದೆ ಎಂಬುದನ್ನು ನೋಡಲಿ,” ಎಂದು ಸವಾಲು ಹಾಕಿದರು.

Comments are closed.