ನವದೆಹಲಿ: ಬಿಎಸ್‌ಪಿ ಅಧ್ಯಕ್ಷೆ ಕುಮಾರಿ ಮಾಯಾವತಿ, ತಾವೇಕೆ ಮದುವೆಯಾಗಿಲ್ಲ ಎಂಬ ವಿಷಯವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.
ಸಮಾಜದ ತುಳಿತಕ್ಕೊಳಪಟ್ಟ ಸಮುದಾಯಗಳನ್ನು ಮೇಲೆತ್ತುವ ಸಲುವಾಗಿಯೇ ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ. ಅಲ್ಲದೆ, ಇದೇ ಕಾರಣಕ್ಕಾಗಿ ನಾನು ವಿವಾಹವನ್ನು ಸಹ ಆಗಲಿಲ್ಲ ಎಂದು ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಮಾಯಾ ಸಿಎಂ ಆಗಿದ್ದ ವೇಳೆ ಬಿಎಸ್‌ಪಿ ನಾಯಕರ ಪ್ರತಿಮೆಗಳ ನಿರ್ಮಾಣಕ್ಕೆ 2000 ಕೋಟಿ ರು. ವೆಚ್ಚ ಮಾಡಲಾಗಿದೆ. ಇದು ಜನರ ತೆರಿಗೆ ಹಣದ ದುರುಪಯೋಗ ಎಂದು ಆರೋಪಿಸಿ ವಕೀಲರೊಬ್ಬರು 2009ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ತಾವು ಬಡವರ ಪರ ಎಂದು ಸಾಬೀತುಪಡಿಸಲು ಮಾಯಾ ಮೇಲ್ಕಂಡ ಹೇಳಿಕೆ ನೀಡಿದ್ದಾರೆ.
Comments are closed.