ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿನ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವೇ? ಹಾಗಾದರೆ ನೀವು ಕಚೇರಿಗಳಿಗೆ ಅಲೆದಲೆದು ಸುಸ್ತಾಗಬೇಕಿಲ್ಲ !
ಇದಕ್ಕೆ ಈಗ ಆಪ್ ವೊಂದು ಪರಿಹಾರ ನೀಡಲಿದೆ. ಹೌದು, ಇದು ನಿಮಗೆ ಅಚ್ಚರಿ ಎನಿಸಿದರು ಕೂಡ ಸತ್ಯ. ಒಖ್ಲಾದ ನಿವಾಸಿಯಾಗಿರುವ ಸೋಫಿಯಾ ಫಾತಿಮಾ, 25,ಎರಡನೇ ಬಾರಿಗೆ ಮತವನ್ನು ಚಲಾಯಿಸುತ್ತಿದ್ದಾರೆ ,ಆದರೆ ಅವರ ಹೆಸರು ಚುನಾವಣಾ ಆಯೋಗದ ಭಾರತ (ಇಸಿಐ) ವೆಬ್ಸೈಟ್ನಲ್ಲಿ ನಾಪತ್ತೆಯಾಗಿದ್ದರಿಂದಾಗಿ ಅವರು ಚಿಂತಾಕ್ರಾಂತರಾಗಿದ್ದರು.ಆಗ ಈ ಆಪ್ ಬಗ್ಗೆ ಸ್ನೇಹಿತನ ಮೂಲಕ ತಿಳಿದಿದ್ದ ಆಕೆಯ ಪತಿ ತನ್ನ ಹೆಂಡತಿಗೆ ‘Missing Voters’ ಆಪ್ ಬಗ್ಗೆ ಮಾಹಿತಿ ನೀಡಿದ್ದಾನೆ.ತದನಂತರ ಆಕೆ ಈ ಆಪ್ ನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ತನ್ನ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾಳೆ.ಈಗ ಆಕೆಯ ಹೆಸರು ಮತದಾರರ ಪಟ್ಟಿಯಲ್ಲಿದೆ.
ಅದೇ ರೀತಿಯಾಗಿ ಉತ್ತರ ಪ್ರದೇಶದ ಮೊಹಮ್ಮದ್ ಅನಾಸ್ ಎನ್ನುವ 21 ವರ್ಷದ ಯುವಕನ ಹೆಸರು ಕೂಡ ನಾಪತ್ತೆಯಾಗಿತ್ತು, ನಂತರ ಈ ಆಪ್ ಮೂಲಕ ಹೆಸರನ್ನು ನೋಂದಣಿ ಮಾಡಲಾಗಿದೆ. ಈ ತಿಂಗಳ ಪ್ರಾರಂಭದಲ್ಲಿ ಬಿಡುಗಡೆಯಾಗಿರುವ ಆಪ್ ಗೆ ಬಾರಿ ಡಿಮಾಂಡ್ ಬಂದಿದೆ.ಈ ಆಪ್ ನ್ನು ಹೈದರಾಬಾದ್ ಮೂಲದ ಖಾಲಿದ್ ಸೈಫುಲ್ಲಾ ಎನ್ನುವವರು ತಮ್ಮದೆ ರೇ ಲ್ಯಾಬ್ಸ್ ಟೆಕ್ನಾಲಜಿ ಎನ್ನುವ ಕಂಪನಿ ಮೂಲಕ ಅಭಿವೃದ್ದಿ ಪಡಿಸಿದ್ದಾರೆ.
ಈ ಆಪ್ ನ್ನು ತಾವು ಗೂಗಲ್ ನಲ್ಲಿ ‘Missing Voters’ಎಂದು ಸರ್ಚ್ ಮಾಡುವುದರ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ 8099 683 683 ಸಂಖ್ಯೆಗೆ ಮಿಸ್ ಕಾಲ್ ನೀಡುವುದರ ಮೂಲಕ ಆಪ್ ನ ಲಿಂಕ್ ನ್ನು ಮೆಸೇಜ್ ಮೂಲಕ ಪಡೆದುಕೊಳ್ಳಬಹುದಾಗಿದೆ.
Comments are closed.