ರಾಷ್ಟ್ರೀಯ

150ಕ್ಕೂ ಹೆಚ್ಚು ಸಮಾವೇಶಗಳಲ್ಲಿ ಮೋದಿ-ಶಾ ಜಂಟಿ ಪ್ರಚಾರ!

Pinterest LinkedIn Tumblr


ನವದೆಹಲಿ: ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಬಿರುಸಾಗಿ ಪ್ರಚಾರ ನಡೆಸುತ್ತಿವೆ. ಸದ್ಯ ಮತ್ತೊಮ್ಮೆ ಗದ್ದುಗೆ ಹಿಡಿಯಲು ಮುಂದಾಗಿರುವ ಬಿಜೆಪಿ ಸಾಲುಸಾಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ತಮ್ಮ ಪಕ್ಷದ ಪರವಾಗಿ ಮತಯಾಚನೆ ಮಾಡಲಿಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ ಅವರು ಜಂಟಿ ಪ್ರಚಾರ ಮಾಡಲಿದ್ಧಾರೆ. ಸುಮಾರು 150ಕ್ಕೂ ಹೆಚ್ಚು ಸಮಾವೇಶಗಳಲ್ಲಿ ಭಾಗಿಯಾಗಿ ಮತಬೇಟೆಗೆ ಮುಂದಾಗಲಿದ್ದಾರೆ ಎನ್ನಲಾಗಿದೆ.

ಬಿಜೆಪಿ ದೇಶದಲ್ಲಿ ಮತ್ತೆ ಅಧಿಕ್ಕಾರಕ್ಕೇರಲು ಮುಂದಾಗಿದೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನಿಂದಲೇ ಗೆಲ್ಲಲು ಮುಂದಾಗಿದ್ಧಾರೆ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ ಸೇರಿದಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಂತಹ ಗಣ್ಯರು ಭರ್ಜರಿ ಪ್ರಚಾರ ಮಾಡಲಿದ್ದಾರೆ. ಇವರನ್ನೇ ಹೆಚ್ಚೆಚ್ಚು ಸಮಾವೇಶಗಳಿಗೆ ಕರೆಸುವ ಮೂಲಕ ಬಿಜೆಪಿ ಚುನಾವಣೆ ಗೆಲ್ಲಲು ತಂತ್ರ ರೂಪಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್​​ ಶಾ ಅವರು ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನದವೆರಗೂ ಪ್ರಚಾರ ಮಾಡಲಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಸಮಾವೇಶಗಳಲ್ಲಿ ಈ ಜೋಡಿ ಭಾಗಿಯಾಗಲಿದೆ. ಅಲ್ಲಿ ಜನರನ್ನುದ್ದೇಶಿಸಿ ಮಾತನಾಡುವ ವೇಳೆ ಬಿಜೆಪಿ ಪಕ್ಷದ ಪರವಾಗಿ ಮತಯಾಚಿಸಲಿದ್ಧಾರೆ. ಇಬ್ಬರ ಜತೆಗೆ ಮತ್ತೋರ್ವ ಬಿಜೆಪಿ ನಾಯಕ ಸಿಎಂ ಯೋಗಿ ಆದಿತ್ಯನಾಥ್​​​​ ಅವರಿಗೆ ಹೆಚ್ಚಿನ ಪ್ರಚಾರದ ಜವಾಬ್ದಾರಿ ನೀಡಲಿದೆ ಎಂದು ತಿಳಿದು ಬಂದಿದೆ.

ಇನ್ನು ಚುನಾವಣೆಯಲ್ಲಿ ಕಾಂಗ್ರೆಸ್​​ ಸೇರಿದಂತೆ ಎಲ್ಲಾ ಪ್ರಾದೇಶಿಕ ಪಕ್ಷಗಳು ಪ್ರಧಾನಿ ಮೋದಿ ಸರ್ಕಾರವನ್ನು ಬಗ್ಗು ಬಡೆಯಲು ಮುಂದಾಗಿವೆ. ಇದೀಗ ಕೇಂದ್ರ ವಿಕ್ಷಗಳಿಗೆ ಸೆಡ್ಡು ಹೊಡೆದು ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಬಿಜೆಪಿ ಹಲವು ರಣತಂತ್ರಗಳನ್ನು ರೂಪಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದ 123 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲು “ಮಿಷನ್‌ 123′ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದೆಲ್ಲೆಡೆ 150 ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ.

ತನ್ನ ಭದ್ರಕೋಟೆಯಾಗಿದ್ದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ಬಿಜೆಪಿ ಸೋತು ಕಾಂಗ್ರೆಸ್​​ ಅಧಿಕ್ಕಾರಕ್ಕೇರಿದೆ. ಇಲ್ಲಿ ಎದುರಾಳಿ ಕಾಂಗ್ರೆಸ್​ ಮುಂದೆ ಸೋತ ಬಿಜೆಪಿ ಈ ಬಾರಿ ಎಚ್ಚೆತ್ತುಕೊಂಡಿದೆ. ಹೇಗಾದರೂ ಮತ್ತೆ ಮತದಾರರನ್ನು ತಲುಪು ಯೋಜನೆಗಳನ್ನು ಹಾಕಿಕೊಂಡಿದೆ. ಕಳೆದ 2014ರ ಚುನಾವಣೆಯಲ್ಲಿ ಗೆದ್ದ ಸೀಟುಗಳಿಗಿಂತ ಹೆಚ್ಚು ಸ್ಥಾನಗಳು ಗೆಲ್ಲಬೇಕು. ಸ್ಪರ್ಧಿಸಿ ಸೋತ 123 ಸ್ಥಾನಗಳಲ್ಲಿಯೂ ನಮ್ಮ ಛಾಪು ಮೂಡಿಸಬೇಕೆಂದು ಬಿಜೆಪಿ ಹೊರಟಿದೆ.

Comments are closed.