ರಾಷ್ಟ್ರೀಯ

ರಾಜ್ಯದಿಂದ ಮೋದಿ ಸ್ಪರ್ಧೆ ಸುಳ್ಳು: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ರ್ಧಿಸಲಿದ್ದಾರೆ ಎಂಬುದು ಶುದ್ದ ಸುಳ್ಳು. ಆ ರೀತಿಯ ಯಾವುದೇ ಮಾಹಿತಿ ಇಲ್ಲ. ಸುದ್ದಿಯೂ ಸರಿಯಲ್ಲ ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು ಬಿಜೆಪಿ ಚುನಾವಣಾ ಕಚೇರಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಡಾ.ಎ.ಬಿ.ಮಾಲಕರಡ್ಡಿ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ , 28 ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಕೊಟ್ಟಿದ್ದೇವೆ.ಆದರೆ 21 ಕ್ಷೇತ್ರಗಳ ಪಟ್ಟಿಯನ್ನು ಪ್ರಟಿಸಿದ್ದಾರೆ. ಉಳಿದ ಅಭ್ಯರ್ಥಿಗಳ ಪಟ್ಟಿ ಇಂದು ಅಥವಾ ನಾಳೆ ಪ್ರಕಟವಾಗಬಹುದು. ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು.ಅಂತಹ ಕ್ಷೇತ್ರಗಳ ನಾಯಕರುಗಳನ್ನು ಕರೆದು ಮಾತುಕತೆ ನಡೆಸಿ ಬಗೆಹರಿಸುತ್ತೇವೆ ಎಂದರು.
ಇನ್ನು ಬೆಂಗಳೂರು ಅಥವಾ ರಾಜ್ಯದ ಇತರೆಡೆಗಳಿಂದ ನರೇಂದ್ರ ಮೋದಿ ಸ್ಪರ್ಧಿಸುವುದಿಲ್ಲ, ಅಂತಹಾ ಯಾವ ಆಲೋಚನೆಯೂ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಮೈತ್ರಿ ಪಕ್ಷ 6 ಸ್ಥಾನ ಗೆದ್ದು ತೋರಿಸಲಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಾಯಿ ತಪ್ಪಿ ಬಿಜೆಪಿ ಎರಡು ಅಂಕಿ ದಾಟದಂತೆ ತಡೆಯುತ್ತೇವೆ ಎಂದಿದ್ದಾರೆ. 22 ಎಂದು ಹೇಳುವ ಬದಲು ಎರಡಂಕಿ ಎಂದಿದ್ದಾರೆ. ಮೈತ್ರಿ ಪಕ್ಷಗಳು ಎರಡಂಕಿ ದಾಟದಂತೆ ಜನ ನೋಡಿಕೊಳ್ಳುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಬೆಂಬಲ ನೀಡುವಂತೆ ರಾಷ್ಟ್ರೀಯ ಮುಖಂಡರಿಗೆ ಮನವಿ ಮಾಡಿದ್ದೇವೆ. ಬೆಂಬಲ ನೀಡಬೇಕು ಎನ್ನುವುದು ನಮ್ಮ ಆಶಯವಾಗಿದೆ. ತಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು ಅಭ್ಯರ್ಥಿ ಹಾಕಬೇಕು ಎನ್ನುವ ಚಿಂತನೆ ಇದೆ. ಅದು ರಾಷ್ಟ್ರೀಯ ಮುಖಂಡರ ವಿವೇಚನೆಗೆ ಬಿಟ್ಟಿದ್ದೇವೆ ಎಂದು ಅವರು ಹೇಳೀದರು.
ಹೈದರಾಬಾದ್ ಕರ್ನಾಟಕ ಭಾಗದ ಪ್ರಭಾವಿ ನಾಯಕ ಡಾ.ಎ.ಬಿ.ಮಲಕರಡ್ಡಿ ಅವರು ಪಕ್ಷ ಸೇರ್ಪಡೆಯಿಂದ ನಮಗೆ ಆನೆ ಬಲ ಬಂದಂತಾಗಿದೆ. ಈಗಾಗಲೆ ಸಾಕಷ್ಟು ನಾಯಕರು ಬಿಜೆಪಿ ಸೇರಿದ್ದಾರೆ. ಇನ್ನಷ್ಟು ನಾಯಕರು ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಡಾ.ಎ.ಬಿ.ಮಾಲಕರಡ್ಡಿ ಅವರು ಅಧಿಕೃತ ಸೇರ್ಪಡೆಗೊಂಡರು. ಯಡಿಯೂರಪ್ಪ ಅವರು ಮಾಲಕರಡ್ಡಿ ಅವರಿಗೆ ಪಕ್ಷದ ಬಾವುಟ.ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿ ಕೊಂಡರು. ಮಾಲಕರಡ್ಡಿ ಜೊತೆ 20 ಕ್ಕೂ ಹೆಚ್ಚು ನಾಯಕರು ಬಿಜೆಪಿ ಸೇರ್ಪಡೆಯಾದರು.
ಕಲಬುರಗಿ ಜಿಲ್ಲೆಯ ರಾಜಕೀಯ ಪರಿಸ್ಥಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಕೇಳಿ ಎಲ್ಲ ನಿರ್ಧಾರಗಳನ್ನು ತಗೆದುಕೊಳ್ಳುತ್ತಾರೆ. ಶಾಸಕರು, ಉಳಿದ ಜನಪ್ರತಿನಿಧಿಗಳು ಲೆಕ್ಕಕ್ಕೆ ಇಲ್ಲವೆಂಬಂತಾಗಿದೆ. ಖರ್ಗೆ ಕುಟುಂಬ ಹೊರತುಪಡಿಸಿ ಮತ್ಯಾರಿಗೂ ಅಲ್ಲಿ ಪ್ರವೇಶ ಇಲ್ಲದಂತಾಗಿದೆ. ಆರು ಬಾರಿ ಗೆದ್ದ ನಮ್ಮಂತಹಾ ಹಿರಿಯರನ್ನು ಕಡೆಗಣಿಸಿ ತಮ್ಮ ಮಗನನ್ನು ಮಂತ್ರಿ ಮಾಡಿದರು. ಯಾದಗಿರಿ ಜಿಲ್ಲೆಗೆ ಅವರ ಮಗನನ್ನು ತಂದು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದರು. ಅಂತಹ ಚಿಕ್ಕ ಹುಡುಗನ ಕೈಕೆಳಗೆ ಕೆಲಸ ಮಾಡುವಂತೆ ಮಾಡಿದರು. ಹಿರಿಯ ನಾಯಕರು ಹುಡುಗನ ನಿರ್ದೇಶನದಂತೆ ಹೇಗೆ ಕೆಲಸ ಮಾಡೋದು> ಮಾಲಕರೆಡ್ಡಿ ಪ್ರಶ್ನಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅವರಿಂದ ಪಕ್ಷ ಅಭಿವೃದ್ದಿಯಾಗುವುದಿಲ್ಲ. ಬದಲಾಗಿ ಪಕ್ಷ ಮತ್ತಷ್ಟು ಮಗದಷ್ಟು ನಾಶವಾಗಲಿದೆ. ಈಗ ಕಲಬುರಗಿಯಲ್ಲಿ ಶರಣಬಸಪ್ಪ ದರ್ಶನಾಪುರ ಅವರ ಪರಿಸ್ಥಿತಿಯೂ ಅದೇ ಆಗಿದೆ. ಹಾಗಾಗಿ ನಾವು ಅನ್ಯ ಮಾರ್ಗವಿಲ್ಲದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆ ಆಗಬೇಕಾಗಿದೆ ಎಂದು ಕಾಂಗ್ರೆಸ್ ಸದ್ಯದ ಪರಿಸ್ಥಿತಿಯನ್ನು ಮಾಲಕರೆಡ್ಡಿ ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಉತ್ತಮ ಯೋಜನೆಗಳು, ಉತ್ತಮ ಯೋಚನೆಗಳ ಮೂಲಕ ಜನ ಸೇವೆ ಮಾಡುತ್ತಿದ್ದಾರೆ. ಉತ್ತಮ ಪ್ರಧಾನಿಯಿಂದ ದೇಶದಲ್ಲಿ ಭದ್ರತೆ, ವಿದೇಶಗಳಲ್ಲಿ ಗೌರವ, ಆರ್ಥಿಕ ಶಿಸ್ತು, ಭ್ರಷ್ಟರಹಿತ ಆಡಳಿತದಿಂದ ದೇಶವನ್ನು ಮತ್ತಷ್ಟು ಉನ್ನತಿಗೆ ಏರಿಸಲು ನರೇಂದ್ರ ಮೋದಿ ಅವರ ಬೆಂಬಲಿಸಲು ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ಮಾಲಕರೆಡ್ಡಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

Comments are closed.