ರಾಷ್ಟ್ರೀಯ

ವೈಎಸ್​​ಆರ್​​ ಕಾಂಗ್ರೆಸ್​​ ಅಭ್ಯರ್ಥಿಗಳ ಮೊದಲ ಪಟ್ಟಿ!

Pinterest LinkedIn Tumblr


ನವದೆಹಲಿ: ಕೇಂದ್ರ ಚುನಾವಣಾ ಆಯೋಗ 17ನೇ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಿಸಿದೆ. ಈ ಬೆನ್ನಲ್ಲೇ ದೇಶಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಂಧ್ರಪ್ರದೇಶದಲ್ಲೀಗ ಒಂದೇ ಹಂತದಲ್ಲಿ ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಟಿಡಿಪಿ ಮತ್ತು ಜನಸೇನಾ ಸೇರಿದಂತೆ ವೈಸ್​ಆರ್​​ ಕಾಂಗ್ರೆಸ್ ಪಕ್ಷವೂ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ಏಪ್ರಿಲ್​​​ 11ರಂದು 175 ವಿಧಾನಸಭಾ ಮತ್ತು 25 ಲೋಕಸಭಾ ಕ್ಷೇತ್ರಗಳಿಗೆ ಏಕಾಕಾಲದಲ್ಲಿಯೇ ಮತದಾನ ನಡೆಯಲಿದೆ. ಅದಾದ ಬಳಿಕ ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಮತ್ತು ವೈಎಸ್​​ಆರ್​​ ಕಾಂಗ್ರೆಸ್​​ ಮತ್ತು ನಟ ಪವನ್​​​ ಕಲ್ಯಾಣ್ ಪಕ್ಷದ ನಡುವೇ ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎನ್ನುತ್ತಿವೆ ಇತ್ತೀಚೆಗಿನ ಸಮೀಕ್ಷೆಗಳು.

ಸದ್ಯ ಟಿಡಿಪಿ ಮತ್ತು ಜನಸೇನಾ ಪಕ್ಷಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ವೈ.ಎಸ್ ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ ಪಕ್ಷ​​ ಆಂಧ್ರದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿ ಹೋರಾಟಕ್ಕೆ ಮುಂದಾಗಿದೆ. ಜನಸೇನಾ ಪಕ್ಷದಂತೆಯೇ ಯಾರ ಜೊತೆಗೂ ಕೈಜೋಡಿಸದೇ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿದೆ. ಇದೀಗ ವೈಎಸ್​​ಆರ್​ ಕಾಂಗ್ರೆಸ್​​ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ಇಲ್ಲಿದೆ ವೈಎಸ್​​ಆರ್​ ಕಾಂಗ್ರೆಸ್​​ ಮೊದಲ 9 ಅಭ್ಯರ್ಥಿಗಳ ಪಟ್ಟಿ..

1. ಅರಕು- ಮಾಧವಿ
2. ಅಮಲಾಪುರ- ಅನುರಾಧ
3. ಅನಂತಪುರ- ತಲಾರಿ ರಂಗಯ್ಯ
4. ಬಾಪಟ್ಲ- ನಂದಿಗಂ ಸುರೇಶ್​​​
5. ಕರ್ನೂಲ್​​​- ಸಂಜೀವ್​​​ ಕುಮಾರ್​​
6. ಹಿಂದೂಪುರ- ಗೋರಂಟ್ಲ ಮಾಧವ್​​
7. ಚಿತ್ತೂರು- ರೆಡ್ಡಪ್ಪ
8. ಕಡಪ- ವೈ.ಎಸ್​​ ಅವಿನಾಶ್​​ ರೆಡ್ಡಿ
9. ರಾಜಂಪೇಟ- ಮಿಥುನ್​​ ರೆಡ್ಡಿ

Comments are closed.