ಕರ್ನಾಟಕ

ನನಗೂ ಮೋದಿಗೂ ಒಂದೇ ವ್ಯತ್ಯಾಸ, ಅವರಿಗೆ ಪತ್ನಿ ಇಲ್ಲ, ನನಗೆ ಪತ್ನಿ ಇದ್ದಾಳೆ: ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ

Pinterest LinkedIn Tumblr


ಯಾದಗಿರಿ: ನಾನು ಒಂದು ತರಹ ಮೋದಿ ಇದ್ದಂಗೆ. ಮೋದಿಗೆ ಹೆಂಡತಿ ಇಲ್ಲ. ನನಗೆ ಪತ್ನಿಯಿದ್ದಾಳೆ. ನಮಗೆ ಮತದಾರರೆ ಎಲ್ಲಾ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದ್ದಾರೆ.

ಗುರುಮಿಠಕಲ್ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ, ಮೋದಿ ಅವರು ಇರುವುದರಿಂದ ಇವತ್ತು ದೇಶ ಸುರಕ್ಷಿತವಾಗಿದೆ. ಮೋದಿ ಅವರನ್ನು ಇಡೀ ವಿಶ್ವವೇ ಮೆಚ್ಚಿದೆ. ಮೋದಿ ಅವರು ತಮಗಾಗಿ ಏನನ್ನು ಮಾಡಿಕೊಂಡಿಲ್ಲ. ಅವರ ತಾಯಿ ಒಂದು ಹಳೇ ಮನೆಯಲ್ಲಿ ಇದ್ದಾರೆ. ದೇಶಕ್ಕಾಗಿ ಮೋದಿ ನಿಸ್ವಾರ್ಥ ಸೇವೆ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಹೊಗಳಿದರು.

ಉಮೇಶ್​ ಜಾಧವ್​ ಅವರಂತಹ ಒಳ್ಳೆಯ ಅಭ್ಯರ್ಥಿ ನಿಮಗೆ ಸಿಕ್ಕಿದ್ದಾರೆ. ಅವರು ಅತ್ಯುತ್ತಮ ವಿದ್ಯಾಭ್ಯಾಸ ಪಡೆದ ಡಾ.ಜಾಧವ್​ ಅವರಂತಹವರು ಸಿಗುವುದು ಕಡಿಮೆ. ಶಾಸಕ ಉಮೇಶ್ ಜಾಧವ್ ಗೆದ್ದರೆ ಕೇಂದ್ರದಲ್ಲಿ ಸಚಿವರಾಗುತ್ತಾರೆ. ಅವರು ಸಚಿವರಾದರೆ ಕ್ಷೇತ್ರದ ಪ್ರತಿಯೊಬ್ಬರೂ ಮಂತ್ರಿ ಇದ್ದಂತೆ. ಜಾದವ್ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ತನ್ನಿ. ನಿಮ್ಮ ಪಾದಕ್ಕೆ ನಮಸ್ಕಾರ ಮಾಡುತ್ತೇನೆ ಎಂದು ಮನವಿ ಮಾಡಿಕೊಂಡರು.

50 ವರ್ಷ ಆದರೂ ಕೆಲವರು ಇದೇ ಕ್ಷೇತ್ರದ ಮತದಾರರ ಗುರುತನ್ನೇ ಹಿಡಿಯುವುದಿಲ್ಲ. ಆದರೆ, ಉಮೇಶ್​ ಜಾಧವ್​ ಹಾಗಲ್ಲ. ಸಾಮಾನ್ಯರು ಅವರ ಮನೆಗೆ ಹೋದರು ಅವರ ಎಲ್ಲ ಕೆಲಸಗಳನ್ನು ಮಾಡಿಕೊಡುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪರೋಕ್ಷವಾಗಿ ಟೀಕೆ ಮಾಡಿದರು. ಅಲ್ಲದೇ, ಮಲ್ಲಿಕಾರ್ಜುನ ಖರ್ಗೆ ಅವರು ಹಳೇ ಪರ್ವತ ಇದ್ದ ಹಾಗೆ. ಆ ಪರ್ವತ ಈ ಬಾರಿ ಬೀಳುತ್ತದೆ ಎನ್ನುವ ಮೂಲಕ ಜಾದವ್ ವಿರುದ್ಧ ಖರ್ಗೆ ಸೋಲುತ್ತಾರೆ ಎಂದು ಚಿಂಚನಸೂರ ಭವಿಷ್ಯ ನುಡಿದರು.

Comments are closed.