ರಾಷ್ಟ್ರೀಯ

ಜಮ್ಮುವಿನ ಜನನಿಬಿಡ ಮಾರ್ಕೆಟ್ ಪ್ರದೇಶದಲ್ಲಿ ಗ್ರೆನೇಡ್ ಸ್ಫೋಟ; ಒಬ್ಬನ ಸಾವು; 30 ಮಂದಿಗೆ ಗಾಯ

Pinterest LinkedIn Tumblr


ಜಮ್ಮು: ಜಮ್ಮು-ಕಾಶ್ಮೀರದ ಜನನಿಬಿಡ ಮಾರ್ಕೆಟ್​ ಪ್ರದೇಶದ ಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಬಾಂಬ್​ ಸ್ಪೋಟ ಸಂಭವಿಸಿದ್ದು, ಒಬ್ಬಾತನ ಸಾವು ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇನ್ನೂ 30 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಇದೇ ವೇಳೆ, ದಕ್ಷಿಣ ಕಾಶ್ಮೀರದ ಶಂಕಿತ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ಧಾರೆಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

ಬಸ್​ ಒಳಗೆ ಪ್ರಬಲ ಗ್ರೆನೇಡ್​ ಫಿಕ್ಸ್ ಮಾಡಲಾಗಿದ್ದು, ಸ್ಪೋಟಿಸಲಾಗಿದೆ ಎಂದು ತಿಳಿದುಬಂದಿದೆ. ಬಸ್​ನಲ್ಲಿ ಎಷ್ಟು ಜನ ಇದ್ದರೂ ಎಂಬ ಬಗ್ಗೆ ಮಾಹಿತಿ ಇಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ದಾಳಿಯ ತೀವ್ರತೆ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದ್ದಾರೆ.

ನಾವು, ಮೊದಲಿಗೆ ಟೈರ್​ ಸ್ಪೋಟಗೊಂಡಿತು. ಆದರೆ, ಇದು ತೀವ್ರಸ್ವರೂಪದ ಸ್ಪೋಟವಾಗಿತ್ತು. ತಕ್ಷಣಕ್ಕೆ ಗಾಯಾಳು ರಕ್ಷಣೆಗೆ ಮುಂದಾದೆವು ಎಂದು ಸ್ಥಳೀಯರೊಬ್ಬರು ತಿಳಿದ್ದಾರೆ. ಗಾಯಾಳುಗಳನ್ನು ಜಮ್ಮುವಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದು ಗ್ರೆನೇಡ್ ದಾಳಿಯಾಗಿದ್ದು, 18 ಜನರು ಗಾಯಗೊಂಡಿದ್ದಾರೆ ಎಂದು ಜಮ್ಮುವಿನ ಐಜಿಪಿ ಎಂ.ಕೆ. ಸಿನ್ಹಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಸ್ಪೋಟಗೊಂಡಿರುವ ಪ್ರದೇಶ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಿಂದ ಸ್ವಲ್ಪ ದೂರದಲ್ಲಿಯೇ ನಡೆದಿದೆ. ಫೆ.14ರಂದು ಪುಲ್ವಾಮದಲ್ಲಿ ಆತ್ಮಹುತಿ ದಾಳಿಕೋರನೊಬ್ಬ ಸೇನಾ ಬಸ್​ ಮೇಲೆ ದಾಳಿ ನಡೆಸಿದ ಪರಿಣಾಮ 40 ಸಿಆರ್​ಪಿಎಫ್​ ಯೋಧರು ಸಾವನ್ನಪ್ಪಿದ್ದರು. ಈ ಘಟನೆ ಬೆನ್ನ ಹಿಂದೆಯೇ ಈ ದಾಳಿ ನಡೆದಿದೆ. ಗಡಿ ಪ್ರದೇಶದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿರುವ ಮಧ್ಯೆ ಈ ಸ್ಪೋಟ ಸಂಭವಿಸಿದ್ದು, ಜನರಲ್ಲಿ ಆತಂಕ ಮೂಡಿದೆ.

ಎರಡು ತಿಂಗಳ ಹಿಂದೆಯೂ ಮುಖ್ಯ ಬಸ್ ನಿಲ್ದಾಣದ ಬಳಿ ಇದೇ ರೀತಿಯಲ್ಲಿ ಗ್ರಿನೇಡ್ ಸ್ಫೋಟ ನಡೆಸಲಾಗಿತ್ತು. ಅದೃಷ್ಟಕ್ಕೆ ಗಾಳಿಯಲ್ಲಿ ಗ್ರಿನೇಡ್ ಸ್ಫೋಟಗೊಂಡಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.

ಇವತ್ತು ನಡೆದ ಗ್ರಿನೇಡ್ ದಾಳಿಯನ್ನು ಯಾರು ಎಸಗಿದ್ದಾರೆಂಬುದು ಇನ್ನೂ ಗೊತ್ತಾಗಿಲ್ಲ.

Comments are closed.