ರಾಷ್ಟ್ರೀಯ

ಗುತ್ತಿಗೆದಾರನ 2ನೇ ಪತ್ನಿಯಿಂದ 3ನೇ ಪತ್ನಿಯ ಹತ್ಯೆ!

Pinterest LinkedIn Tumblr


ನವದೆಹಲಿ: ಮುಂಬೈ ಮೂಲದ ಸುಶೀಲ್​​ ಮಿಶ್ರಾ ಎಂಬ ವ್ಯಕ್ತಿಗೆ ಮೂವರು ಪತ್ನಿಯರು. ಈತ ಕ್ಲಾಸ್​​​-1 ಗುತ್ತಿಗೆದಾರ. ಮೊದಲಿಗೆ ಇಬ್ಬರನ್ನು ಮದುವೆಯಾಗಿದ್ದ ಈತ, ತನ್ನ ಹೆಂಡತಿಯರ ಕಣ್ತಪ್ಪಿಸಿ ಮೂರನೇ ಮಹಿಳೆಯನ್ನು ಮದುವೆಯಾಗಿದ್ದಾನೆ. ಈ ವಿಷಯ ತಿಳಿದ ಕೂಡಲೇ ಇಬ್ಬರು ಹೆಂಡತಿಯರ ಜತೆಗಿನ ಈತನ ಸಾಂಸಾರಿಕ ಜೀವನದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಬೇಸತ್ತ ಇಬ್ಬರು ಹೆಂಡತಿಯರು ಮೂರನೇ ಹೆಂಡತಿಯನ್ನು ಕೊಲ್ಲಲು ನಿರ್ಧರಿಸಿದ್ದಾರೆ.

ಒಂದು ದಿನ 2ನೇ ಹೆಂಡತಿಗೆ ಫೋನಾಯಿಸಿದ ಮೊದಲನೇ ಹೆಂಡತಿಯ ಇಬ್ಬರು ಪುತ್ರಿಯರು 3ನೇ ಹೆಂಡತಿಯನ್ನು ಕೊಲ್ಲಲು ಸಹಾಯ ಮಾಡುವುದಾಗಿ ತಿಳಿಸಿದ್ಧಾರೆ. ಈ ಇಬ್ಬರು ಪುತ್ರಿಯರು ಜತೆಗೆ ಕೂಡಲೇ ತನ್ನ ಗಂಡನ ಮೆನೆಗೆ ತೆರಳಿದ ಎರಡನೇ ಹೆಂಡತಿ, ಸುನೀಲ್​​ ಮಿಶ್ರಾ ಇಲ್ಲದ ಸಮಯ ನೋಡಿ 3ನೇ ಹೆಂಡತಿಯನ್ನು ಮುಗಿಸಿದ್ದಾರೆ. ಇದಕ್ಕೆ ಇಬ್ಬರು ಪುತ್ರಿಯರ ಪೈಕಿ ಒಬ್ಬರ ಪ್ರಿಯಕರ ಕೂಡ ಸಹಾಯ ಮಾಡಿದ್ದ ಎನ್ನಲಾಗಿದೆ.

33 ವರ್ಷದ ಪಾರ್ವತಿ ಎಂಬಾಕೆ ಸುಶೀಲ್​​​ ಮಿತ್ರಾ ಅವರ ಎರಡನೇ ಹೆಂಡತಿಯನ್ನು ಕೊಂದ ಆರೋಪಿ. ತನ್ನ ಗಂಡ ಮತ್ತು ಮೊದಲ ಇಬ್ಬರು ಹೆಂಡತಿಯರ ನಡುವಿನ ಕಿತ್ತಾಟಕ್ಕೆ ಬಲಿಯಾದಾಕೇ ಯೋಗಿತಾ. ಯೋಗಿತಾ ಸುಶೀಲ್​​ ಮಿತ್ರಾ ಅವರ ಮೂರನೇ ಹೆಂಡತಿ.

ಕೊಂದ ಕೂಡಲೇ ಯೋಗಿತಾ ಮೃತದೇಹವನ್ನು ಪಾರ್ವತಿ ಮತ್ತು ಮೊದಲನೇ ಹೆಂಡತಿ ಇಬ್ಬರು ಪುತ್ರಿಯರು ಸೋಪಾರ ಎಂಬ ನಗರದ ಮಾಲ್​​ ಬಳಿಗೆ ಸಾಗಿಸಿ ಮೂಟೆಯಲ್ಲಿ ಕಟ್ಟಿ ಬಿಸಾಡಿದ್ದಾರೆ. ಪಾಲ್ಘಾರ್​​ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಕ್ಯಾಮರದಲ್ಲಿ ಸೆರೆಯಾಗಿದೆ.

ಈ ಸಂಬಂಧ ಆರೋಪಿ ಪಾರ್ವತಿ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಾಗಿದೆ. ನಾಲ್ವರನ್ನು ಬಂಧಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸುಶೀಲ್​​​ ಮಿಶ್ರಾ ಯೋಗಿತಾ ಎಂಬಾಕೆ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ. ಹೀಗಾಗಿ ಆಕೆಯನ್ನು ಕೊಂದೆವು ಎಂದು ಪಾರ್ವತಿ ಹೇಳಿದ್ದಾರೆ ಎಂದು ಪೊಲೀಸ್​​ ಮೂಲಗಳು ತಿಳಿಸಿವೆ.

Comments are closed.