ರಾಷ್ಟ್ರೀಯ

ಮೋದಿ ರ್ಯಾಲಿಯಲ್ಲಿ ಸೇರಿಸಿರುವ ಜನರನ್ನು ನಾನು ರಸ್ತೆ ಬದಿಯ ಬೀಡಾ ಅಂಗಡಿ ಮುಂದೆ ಸೇರಿಸಬಲ್ಲೆ; ಲಾಲು ಪ್ರಸಾದ್

Pinterest LinkedIn Tumblr


ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್​ ಕುಮಾರ್​ ಜೊತೆಯಾಗಿ ಇಂದು ಬಿಹಾರದ ಪಾಟ್ನಾದಲ್ಲಿ ನಡೆಸಿದ ಸಂಕಲ್ಪ ರ್ಯಾಲಿ ಬಗ್ಗೆ ಮಾಜಿ ಮುಖ್ಯಮಂತ್ರಿ ಲಾಲು ಲೇವಡಿ ಮಾಡಿದ್ದಾರೆ. ಅಲ್ಲಿ ನಡೆದಿರುವ ಭವ್ಯ ಸಮಾವೇಶ ಒಂದು ಭ್ರಮೆ ಅಷ್ಟೇ ಎಂದು ಜರಿದಿದ್ದಾರೆ.

ನರೇಂದ್ರ ಮೋದಿ ಮತ್ತು ಪಾಸ್ವಾನ್​ ಕೆಲವು ತಿಂಗಳಿನಿಂದ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಮೂಲವನ್ನು ಬಳಸಿಕೊಂಡು ಗಾಂಧಿ ಮೈದಾನದಲ್ಲಿ ಬೃಹತ್​ ರ್ಯಾಲಿ ಆಯೋಜಿಸಿದ್ದಾರೆ. ಅವರು ರ್ಯಲಿಯಲ್ಲಿ ಸೇರಿಸಿರುವ ಜನರನ್ನು ನಾನು ರಸ್ತೆ ಬದಿಯ ಬೀಡಾ ಅಂಗಡಿ ಮುಂದೆ ಸೆಳೆಯಬಲ್ಲೆ ಎಂದು ಲಾಲು ಪ್ರಸಾದ್ ಯಾದವ್​ ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದಾರೆ.

ಇದೇ ಮೈದಾನದಲ್ಲಿ ಕಾಂಗ್ರೆಸ್​ ಜನ ಆಕಾಂಕ್ಷ ಸಮಾವೇಶ ನಡೆಸಿದ ಸರಿಯಾಗಿ ಒಂದು ತಿಂಗಳಿಗೆ ಬಿಜೆಪಿ ಮೆಗಾ ರ್ಯಾಲಿ ಆಯೋಜಿಸಿದೆ. ಈ ಸಾರ್ವಜನಿಕ ಸಮಾವೇಶ ತುಂಬಾ ಮಹತ್ವದ್ದಾಗಿದೆ. ಏಕೆಂದರೆ, 2010ರ ನಂತರ ಮೋದಿ ಮತ್ತು ನಿತೀಶ್​ ಕುಮಾರ್​ ಒಂದೇ ಹಂಚಿಕೆ ಹಂಚಿಕೊಂಡಿದ್ದು ಇದೇ ಮೊದಲು.

ಕಾರ್ಯಕ್ರಮದ ಆಯೋಜಕರು ಬಹಳ ಚತುರ ಕ್ಯಾಮರಾಗಳನ್ನು ಬಳಸಿದ್ದಾರೆ. ಹೆಚ್ಚಿನ ಜನರು ಸೇರಿದ್ದಾರೆ ಎಂದು ಬಿಂಬಿಸಲು ಜೂಮ್​ ಮಾಡಿ ತೋರಿಸುತ್ತಿದ್ದಾರೆ. ನಾಯಕರೇ ಜನರನ್ನು ವಂಚಿಸಬೇಡಿ, ಜೂಮ್​ ಮಾಡಿದ ದೃಶ್ಯಾವಳಿಗಳನ್ನು ಬಿಟ್ಟು, ವಾಸ್ತವ ದೃಶ್ಯಾವಳಿಗಳನ್ನು ನೀಡಿ ಎಂದು ಲಾಲು ಸವಾಲು ಹಾಕಿದ್ದಾರೆ.

Comments are closed.