ರಾಷ್ಟ್ರೀಯ

ಆಮೇಥಿಯಲ್ಲಿ ಜಗತ್ತಿನ ಅತ್ಯಂತ ಸುಧಾರಿತ ರೈಫಲ್​ ಎಕೆ-203 ತಯಾರಿಕಾ ಘಟಕ; ಮೋದಿ

Pinterest LinkedIn Tumblr


ಆಮೇಥಿ: ಎಕೆ-47 ನಂತರ ಅತ್ಯುತ್ಕ್ರುಷ್ಕ ಎಕೆ-203 ರೈಫೆಲ್​ ಮುಂದೆ ಆಮೇಥಿಯ ಕೊರ್ವಾ ಪ್ರದೇಶದಲ್ಲಿ ತಯಾರಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಣೆ ಮಾಡಿದರು. ಈ ಕಾರ್ಖಾನೆಯಿಂದಾಗಿ ಈ ಪ್ರದೇಶ ಹೆಚ್ಚಿನ ಅಭಿವೃದ್ಧಿ ಸಾಧಿಸಲಿದೆ ಎಂದು ಮೋದಿ ಬಣ್ಣಿಸಿದರು.

ಜಗತ್ತಿನ ಅತ್ಯಂತ ಸುಧಾರಿತ ರೈಫೆಲ್​ ಎಕೆ-203 ರೈಫಲ್​ ಆಮೇಥಿಯಲ್ಲಿ ತಯಾರಾಗಲಿವೆ. ಭಾರತ ಮತ್ತು ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಈ ರೈಫಲ್​ ತಯಾರಿಕೆ ಘಟನೆ ಆರಂಭವಾಗಲಿದೆ. ಇದಕ್ಕಾಗಿ ರಷ್ಯಾ ಅಧ್ಯಕ್ಷ, ನನ್ನ ಸ್ನೇಹಿತರಾದ ವ್ಲಾಡಿಮಿರ್ ಪುಟಿನ್ ಅವರಿಗೆ ಕೃತಜ್ಞನಾಗಿದ್ದೇನೆ. ಅವರ ಸಹಕಾರದೊಂದಿಗೆ ಸಾಧ್ಯವಾದಷ್ಟು ಶೀಘ್ರದಲ್ಲೇ ಈ ಸಾಹಸ ಮಾಡಲಿದ್ದೇವೆ ಎಂದು ಮೋದಿ ತಿಳಿಸಿದರು.
ಈ ರೈಫಲ್​ ಆಮೇಥಿಯಲ್ಲಿ ತಯಾರಿಗಿದ್ದು ಎಂದು ಎಲ್ಲರಿಗೂ ತಿಳಿಯಬೇಕು ಮತ್ತು ಭಯೋತ್ಪಾದಕರು ಹಾಗೂ ನಕ್ಸಲರನ್ನು ಮಟ್ಟ ಹಾಕಲು ಈ ರೈಫಲ್​ ನಮ್ಮ ಸೈನಿಕರಿಗೆ ಸಹಾಯಕವಾಗಲಿವೆ ಎಂದು ಪ್ರಧಾನಿ ಹೇಳಿದರು.

ವರದಿಯ ಪ್ರಕಾರ, ರಷ್ಯಾದೊಂದಿಗೆ ಭಾರತ 7,50,000 ರೈಫಲ್​ ತಯಾರಿಕೆ ಘಟಕ ನಿರ್ಮಾಣದ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ರೈಫಲ್​ಗಳನ್ನು ಸೈನ್ಯದ ಕಾಲಾಳು ಪಡೆಗೆ ನೀಡಲಾಗುತ್ತದೆ.

ಮೋದಿ ಅವರು ಬಿಹಾರದ ಪಾಟ್ನಾದಲ್ಲಿ ಸಂಕಲ್ಪ ರ್ಯಾಲಿಯಲ್ಲಿ ಪಾಲ್ಗೊಂಡು, ನಂತರ ಆಮೇಥಿಗೆ ಆಗಮಿಸಿದರು. ಆಮೇಥಿ ಸಂಪ್ರದಾಯಬದ್ಧವಾಗಿ ಗಾಂಧಿ ಕುಟುಂಬಕ್ಕೆ ನಿಷ್ಠವಾಗಿದೆ. ಅವರದೇ ಸರ್ಕಾರದ ಒಂದು ಉದಾಹರಣೆ ನೀಡುತ್ತೇನೆ. ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​ ಎಂಬುದು ಅವರ ಧ್ಯೇಯವಾಕ್ಯ. ಯಾರು ನಮಗೆ ಮತ ಹಾಕುತ್ತಾರೆ ಮತ್ತು ಅವರು ಅವರೆಲ್ಲ ನಮ್ಮವರಲ್ಲ ಎಂದು ಕಾಂಗ್ರೆಸ್​ಅನ್ನು ಟೀಕಿಸಿದರು.

2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಆಮೇಥಿಗೆ ಆಗಮಿಸಿದ್ದರು. ಈ ನಗರದ ಪಕ್ಕದಲ್ಲಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸ್ಪರ್ಧಿಸುವ ರಾಯ್​ಬರೇಲಿಗೂ ಪ್ರಧಾನಿ ಮೋದಿ ಅವರು ಡಿಸೆಂಬರ್​ನಲ್ಲಿ ಭೇಟಿ ನೀಡಿದ್ದರು.

ಮೋದಿ ಅವರು ಪ್ರಧಾನಿಯಾಗುವ ಮುನ್ನ 2014ರ ಮೇ 5ರಂದು ಆಮೇಥಿಗೆ ತೆರಳಿ, ಕಾಂಗ್ರೆಸ್​ನಿಂದ ಸ್ಪರ್ಧಿಯಾಗಿದ್ದ ರಾಹುಲ್​ ಗಾಂಧಿ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸ್ಮೃತಿ ಇರಾನಿ ಪರ ಪ್ರಚಾರ ಮಾಡಿದ್ದರು.

Comments are closed.