ರಾಷ್ಟ್ರೀಯ

ಹರ್ಷೋದ್ಗಾರದ ಮಧ್ಯೆ ಭಾರತಕ್ಕೆ ಕಾಲಿಟ್ಟ ಅಭಿನಂದನ್!

Pinterest LinkedIn Tumblr


ವಾಘಾ: ಅಭಿನಂದನ್‍ಗೆ ಜೈ, ಭಾರತ್ ಮಾತಾಕೀ ಜೈ.. ಒಂದೇ ಮಾತರಂ ಜಯಘೋಷ.. ವೆಲ್‍ಕಂ ಟೈಗರ್.. ಜೈ ಹಿಂದ್ ಅಭಿಮಾನಿಗಳ ಹರ್ಷೋದ್ಗಾರದ ಮಧ್ಯೆ ವಾಯುಸೇನೆಯ ವೀರಯೋಧ ಅಭಿನಂದನ್ ಅವರು ಮರಳಿ ಭಾರತಕ್ಕೆ ಬಂದಿದ್ದಾರೆ.

ಪಾಕಿಸ್ತಾನದ ವಾಯುದಾಳಿಯನ್ನು ಹಿಮ್ಮೆಟ್ಟುವ ವೇಳೆ ಗಡಿ ದಾಟಿ ಪಾಕ್ ಸೈನ್ಯದ ವಶದಲ್ಲಿದ್ದ ಅಭಿನಂದನ್ ಶುಕ್ರವಾರ ಸಂಜೆ ವೇಳೆಗೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿ ಮತ್ತೆ ತನ್ನ ಕುತಂತ್ರವನ್ನು ಪ್ರದರ್ಶಿಸಿದರು. ವಾಘಾ ಗಡಿಯಲ್ಲಿ ಕಾದು ಕುಳಿತ್ತಿದ್ದ ಭಾರತೀಯ ಅಭಿಮಾನಿಗಳ ಛಲ ರಾತ್ರಿಯಾದ್ರು ಕಡಿಮೆ ಆಗಲಿಲ್ಲ. ಸಂಜೆ ವೇಳೆಗೆ ಮಳೆ ಬಂದಿದ್ದರೂ ಕೂಡ ಲೆಕ್ಕಿಸದ ಭಾರತೀಯರು ಅಲ್ಲೇ ನಿಂತಿದ್ದರು. ಇದೆಲ್ಲಾದರ ನಡುವೆಯೇ ರಾತ್ರಿ 9.15 ಗಂಟೆ ವೇಳೆಗೆ ಭಾರತದ ನೆಲವನ್ನು ಪ್ರವೇಶಿಸಿದ್ದಾರೆ.

ವಾಘಾ ಗಡಿಯಿಂದ ನೆರ ಅವರನ್ನು ಅಮೃತಸರಕ್ಕೆ ಕರೆದ್ಯೊಯಲಾಗುತ್ತದೆ. ಆ ಬಳಿಕ ಅಲ್ಲಿಂದ ಸೇನಾಧಿಕಾರಿಗಳೊಂದಿಗೆ ದೆಹಲಿಗೆ ವಿಮಾನದಲ್ಲಿ ಕರೆತರಲಾಗುತ್ತದೆ. ಅಭಿನಂದನ್ ಅವರನ್ನು ಸ್ವಾಗತ ಮಾಡಲು ವಾಯುಸೇನಾ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಥಾಮಸ್ ಕುರಿಯನ್ ಹಾಗೂ ಭಾರತ ಸರ್ಕಾರದ ಅಧಿಕಾರಿಗಳು ವಾಘಾ ಗಡಿಗೆ ಆಗಮಿಸಿದ್ದರು. ಅಲ್ಲದೇ ಅಭಿನಂದನ್ ಪೋಷಕರು ಕೂಡ ಸ್ಥಳದಲ್ಲಿ ಹಾಜರಿದ್ದರು.

ಅಭಿನಂದನ್‍ರನ್ನು ಭಾರತಕ್ಕೆ ಹಸ್ತಾಂತರಕ್ಕೆ ಮಾಡುವ ಸರ್ಕಾರ ನೀತಿಯನ್ನು ವಿರೋಧಿಸಿ ಪಾಕಿಸ್ತಾನ ಕೆಲ ಹೋರಾಟಗಾರರು ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿ ಬಿಡುಗಡೆಗೆ ತಡೆ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಈ ಪಿಐಎಲ್ ಅನ್ನು ನ್ಯಾಯಾಲಯ ವಜಾಗೊಳಿಸಿತ್ತು.

Comments are closed.