ಅಂತರಾಷ್ಟ್ರೀಯ

ಇಬ್ಬರಲ್ಲ, ಒಬ್ಬ ಐಎಎಫ್ ಪೈಲಟ್ ಮಾತ್ರ​ ನಮ್ಮ ವಶದಲ್ಲಿದ್ದಾರೆ: ಉಲ್ಟಾ ಹೊಡೆದ ಪಾಕ್

Pinterest LinkedIn Tumblr


ಇಸ್ಲಾಮಾಬಾದ್: ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದು, ಇಬ್ಬರು ಪೈಲಟ್​ಗಳು ನಮ್ಮ ವಶದಲ್ಲಿದ್ದಾರೆ ಎಂದಿದ್ದ ಪಾಕಿಸ್ತಾನ ಈಗ ಉಲ್ಟಾ ಹೊಡೆದಿದ್ದು, ಇಬ್ಬರಲ್ಲ, ಒಬ್ಬರು ಐಎಎಫ್ ಪೈಲಟ್ ಮಾತ್ರ ನಮ್ಮ ವಶದಲ್ಲಿದ್ದಾರೆ ಎಂದು ಹೇಳಿದೆ.
ಇಬ್ಬರಲ್ಲಿ ಒಬ್ಬ ಐಎಎಫ್ ಪೈಲಟ್​ನನ್ನು ನಮ್ಮ ವಶಕ್ಕೆ ಪಡೆದಿದ್ದೇವೆ ಎಂದು ಪಾಕಿಸ್ತಾನ ಸೇನಾ ವಕ್ತಾರ ಮೇಜರ್​ ಜನರಲ್ ಆಸಿಫ್​ ಗಫೂರ್ ಅವರು​ ಸ್ಪಷ್ಟನೆ ನೀಡಿದ್ದಾರೆ.
ಭಾರತದ ವಿಂಗ್​ ಕಮಾಂಡರ್ ಅಭಿನಂದನ್ ನಮ್ಮ ವಶದಲ್ಲಿದ್ದಾರೆ ಎಂದು ಅವರು ಟ್ವೀಟ್​ ಮಾಡಿದ್ದಾರೆ. ಅಲ್ಲದೆ ಬದ್ಗಾಮ್ ನಲ್ಲಿ ಪತನಗೊಂಡ ವಿಮಾನಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಅವರು ಇಬ್ಬರು ಪೈಲಟ್​ಗಳನ್ನು ವಶಕ್ಕೆ ಪಡೆದಿದ್ದಾಗಿ ಹೇಳಿದ್ದರು.

Comments are closed.