ರಾಷ್ಟ್ರೀಯ

ತನ್ನ ಪೈಲೆಟ್ ಮಾಹಿತಿ ನೀಡಿ ಎಂದು ಪಾಕ್ ಗೆ ಭಾರತದಿಂದ ಸಮನ್ಸ್ ಜಾರಿ!

Pinterest LinkedIn Tumblr


ನವದೆಹಲಿ: ಮಿಗ್-21 ಯುದ್ಧ ವಿಮಾನದ ಪೈಲೆಟ್ ಪಾಕಿಸ್ತಾನದ ವಶದಲ್ಲಿರುವ ಕುರಿತು ಭಾರತ ಸ್ಪಷ್ಟನೆ ನೀಡಿದೆ. ಅಲ್ಲದೇ ಜಿನೆವಾ ಒಪ್ಪಂದದಂತೆ ಪೈಲೆಟ್ ನನ್ನು ಸುರಕ್ಷಿತವಾಗಿ ಮರಳಿಸುವಂತೆ ಪಾಕಿಸ್ತಾನಕ್ಕೆ ಸಮನ್ಸ್ ಜಾರಿ ಮಾಡಿದೆ.

ಪಾಕಿಸ್ತಾನದ ಡೆಪ್ಯುಟಿ ಹೈ ಕಮಿಷನರ್ ಸೈಯದ್ ಹೈದರ್ ಷಾ ಅವರಿಗೆ ಭಾರತ ವಿದೇಶಾಂಗ ಸಚಿವಾಲಯ ಸಮನ್ಸ್ ನೀಡಿದ್ದು, ಪಾಕಿಸ್ತಾನ ನಾಪತ್ತೆಯಾಗಿರುವ ಪೈಲಟ್ ಕುರಿತು ಮಾಹಿತಿ ನೀಡಬೇಕೆಂದು ಕೇಳಿದೆ.

ಇದೇ ವೇಳೆ ಪಾಕಿಸ್ತಾನದಲ್ಲಿನ ಭಾರತ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಅವರಿಗೆ ಪಾಕ್ ಸಮನ್ಸ್ ನೀಡಿದ್ದು, ಭಾರತದ ಕದನ ವಿರಾಮ ಉಲ್ಲಂಘನೆ ಕುರಿತು ಆರೋಪಿಸಿದೆ.

Comments are closed.