ರಾಷ್ಟ್ರೀಯ

ಪಾಕ್ ಮೇಲೆ ಬಿಸಿನೆಸ್ ಬಾಂಬ್: ಮೋದಿ ಹೊಡೆತಕ್ಕೆ ಬೆಸ್ತು ಬಿದ್ದ ಇಮ್ರಾನ್ !

Pinterest LinkedIn Tumblr


ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಅದರ ಮೊದಲ ಭಾಗವಾಗಿ ಪಾಕಿಸ್ತಾನದ ಮೇಲೆ ಬ್ಯುಸಿನೆಸ್ ಬಾಂಬ್ ಹಾಕಿದ್ದಾರೆ.

ಅದರಂತೆ ಪಾಕ್ ಮೇಲೆ ಆಮದು ಸುಂಕ ದ್ವಿಗುಣಗೊಳಿಸಿರುವ ಮೋದಿ ಸರ್ಕಾರ, ಪಾಕ್‌ನಿಂದ ಆಮದಾಗುವ ವಸ್ತುಗಳ ಮೇಲೆ ಶೇ.200 ರಷ್ಟು ತೆರಿಗೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ 15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಭಾರತಕ್ಕೆ ಕಳುಹಿಸಲು ಪಾಕಿಸ್ತಾನ ಇದೀಗ 30 ಲಕ್ಷ ರೂ. ತೆರಿಗೆ ಕಟ್ಟಬೇಕಾಗಿದೆ.

ಈ ಕುರಿತು ಸ್ವತಃ ಪಾಕಿಸ್ತಾನ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದು, ವಾಘಾ ಗಡಿಗೆ ಬರುವ ವಾಹನಗಳು ಹೊಸ ತೆರಿಗೆ ಭರಿಸಲಾಗದೇ ಕಂಗಾಲಾಗಿವೆ ಎನ್ನಲಾಗಿದೆ. ಗಡಿಯೂದ್ದಕ್ಕೂ ಪಾಕಿಸ್ತಾನದ ಟ್ರಕ್‌ಗಳು ಸಾಲಾಗಿ ನಿಂತಿದ್ದು, ಭಾರತದ ಚೆಕ್ ಪೋಸ್ಟ್‌ಗಳಲ್ಲಿ ಕಸ್ಟಮ್ಸ್ ಸುಂಕ ಭರಿಸಲು ಸಾಧ್ಯವಾಗದೇ ಪಾಕ್ ಪರದಾಡುತ್ತಿದೆ.

ಅಲ್ಲದೇ ಕೆಲವು ಪಾಕ್ ಉದ್ಯಮಿಗಳ ವಾಹನಗಳು ತೆರಿಗೆ ಭರಿಸಲಾಗದೇ ಗಡಿಯಿಂದ ವಾಪಸ್ಸು ಹೊರಟಿವೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಒಟ್ಟಿನಲ್ಲಿ ಮೋದಿ ಸರ್ಕಾರದ ಬ್ಯುಸಿನೆಸ್ ಬಾಂಬ್‌ಗೆ ಪಾಕ್ ತರಗುಟ್ಟಿದ್ದು, ಸಂಕಷ್ಟ ಅನುಭವಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Comments are closed.