ರಾಷ್ಟ್ರೀಯ

ರಾಮಮಂದಿರ ನಿರ್ಮಾಣ ವಿವಾದ ಇತ್ಯರ್ಥಕ್ಕೆ 24 ಗಂಟೆಯೂ ಬೇಕಿಲ್ಲ: ಯೋಗಿ

Pinterest LinkedIn Tumblr


ಲಕ್ನೌ: ಅಯೋಧ್ಯೆ ರಾಮಮಂದಿರ ನಿರ್ಮಾಣ ವಿವಾದವನ್ನು ಕೇವಲ 24 ಗಂಟೆಗಳ ಒಳಗೆ ಬಗೆಹರಿಸಬಹುದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಾಮ ಮಂದಿರ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಈಗಾಗಲೇ ಈ ವಿವಾದ ಅಲಹಾಬಾದ್ ಹೈಕೋರ್ಟ್’ನಲ್ಲಿ ಬಗೆಹರಿದಿದೆ. ಕೇವಲ ಅದು ರಾಮಜನ್ಮಭೂಮಿಯೇ ಅಥವಾ ಇಲ್ಲವೇ ಎಂಬುದು ಮಾತ್ರ ನಿರ್ಧರಿತವಾಗಬೇಕಿದೆ ಎಂದು ಹೇಳಿದರು.

ಇನ್ನು, ವಿವಾದ ಇತ್ಯರ್ಥದ ಬಗ್ಗೆ ಮಾತನಾಡಿದ ಯೋಗಿ, “ನನ್ನ ಪ್ರಕಾರ ರಾಮಮಂದಿರ ನಿರ್ಮಾಣ ವಿವಾದ ಬಗೆಹರಿಸಲು 24 ರಿಂದ 25 ಗಂಟೆಗಳು ಸಾಕು. ಅಷ್ಟಕ್ಕೂ ಎಲ್ಲಿ ರಾಮ ಜನಿಸಿದ ಎನ್ನಲಾಗಿದೆಯೋ ಅಲ್ಲಿಯೇ ರಾಮಮಂದಿರ ನಿರ್ಮಾಣವಾಗಬೇಕು. ಈ ವಿಚಾರದಲ್ಲಿ ಯಾವುದೇ ಗೊಂದಲ ಇರಬಾರದು ಎಂದು ಹೇಳಿದರು.

Comments are closed.