ರಾಷ್ಟ್ರೀಯ

ಪಶ್ಚಿಮ ಬಂಗಾಳ: ರಸ್ತೆ ಮಾರ್ಗವಾಗಿ ಸಮಾವೇಶ ನಡೆಯುವ ಸ್ಥಳಕ್ಕೆ ಬಂದ ಉತ್ತರಪ್ರದೇಶ ಯೋಗಿ

Pinterest LinkedIn Tumblr


ಕೋಲ್ಕತ್ತಾ: ಕೇಂದ್ರ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ನಡುವಿನ ಸಮರ ಇಂದು ಮತ್ತಷ್ಟು ತಾರಕಕ್ಕೇರಿದೆ. ಪಶ್ಚಿಮ ಬಂಗಾಳದ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್​ನಲ್ಲಿ ಬಂದು ಇಳಿಯಲು ಇಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಜಾರ್ಖಂಡ್​ನಿಂದ ರಸ್ತೆ ಮಾರ್ಗವಾಗಿ ಸಮಾವೇಶ ನಡೆಯುವ ಸ್ಥಳಕ್ಕೆ ತೆರಳಿದ್ದಾರೆ. ಯೋಗಿ ಆದಿತ್ಯನಾಥ್​ ಜೊತೆಗೆ ಶಿವರಾಜ್​ ಸಿಂಗ್​ ಚೌಹ್ಹಾಣ್​ ಮತ್ತು ಶಹನವಾಜ್​ ಹುಸೈನ್​ ಸೇರಿ ಹಲವು ಬಿಜೆಪಿ ನಾಯಕರಿಗೆ ಅನುಮತಿ ನಿರಾಕರಿಸಲಾಗಿದೆ.

ಪುರುಲಿಯಾ ಸಮಾವೇಶ ಇನ್ನೆನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದಾರೆ. ಆದರೆ, ಸಮಾವೇಶ ನಡೆಸಲು ಅಧಿಕೃತವಾಗಿ ಆದೇಶ ಪಡೆಯಲಾಗಿಲ್ಲ. ಸಮಾವೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಜೆಪಿ ನಾಯಕರು ಭರವಸೆ ನೀಡಿದರೆ ಸಮಾವೇಶ ನಡೆಯುತ್ತದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ್​ ಅವರು ಬಿಜೆಪಿ ಅಧಿಕಾರಿದಲ್ಲಿರುವ ಜಾರ್ಖಂಡ್​ನ ಬೋಕಾರೋಗೆ ಹೆಲಿಕಾಪ್ಟರ್​ನಲ್ಲಿ ಆಗಮಿಸಿ, ನಂತರ ರಸ್ತೆ ಮಾರ್ಗವಾಗಿ ಕೋಲ್ಕತ್ತದಿಂದ 300 ಕಿ.ಮೀ.ದೂರದಲ್ಲಿರುವ ಪುರುಲಿಯಾಗೆ ತೆರಳಿದ್ದಾರೆ. ಇದಕ್ಕೂ ಮುಂಚೆ ಆದಿತ್ಯನಾಥ್​, ದಕ್ಷಿಣ ದಿನಜ್​ಪುರ್​ ಗಣತಂತ್ರ ಉಳಿಸಿ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಹೆಲಿಕಾಪ್ಟರ್​ನಲ್ಲಿ ಬರಲು ಅನುಮತಿ ಸಿಗದ ಹಿನ್ನೆಲೆಯಲ್ಲಿ ಆಡಿಯೋ ಮೂಲಕ ಮಾತನಾಡಿದ ಅವರು, ಮಮತಾ ಜೀ ಪ್ರಜಾಪ್ರಭುತ್ವದಲ್ಲಿ ಯಾರೂ ಅಧಿಕಾರವನ್ನು ದುರುಪಯೋಗಿ ಪಡಿಸಿಕೊಳ್ಳಬಾರದು. ಪಶ್ಚಿಮಬಂಗಾಳದ ಸರ್ಕಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸಮಂಜಸವಲ್ಲ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದರು.

ಯೋಗಿ ಆದಿತ್ಯನಾಥ್​ ಅವರು ಪಶ್ಚಿಮ ಬಂಗಾಳಕ್ಕೆ ಬಂದು ಸಮಾವೇಶ ನಡೆಸುವುದಕ್ಕೆ ತಿರುಗೇಟು ನೀಡಿರುವ ಮಮತಾ ಬ್ಯಾನರ್ಜಿ, ಮೊದಲು ಯೋಗಿ ಆದಿತ್ಯನಾಥ್​ ಅವರು ಉತ್ತರಪ್ರದೇಶಕ್ಕೆ ರಕ್ಷಣೆ ನೀಡಲಿ. ಅವರ ರಾಜ್ಯದಲ್ಲೇ ಪೊಲೀಸ್​ ಅಧಿಕಾರಿಗಳು ಸೇರಿದಂತೆ ನೂರಾರು ಮಂದಿ ಕೊಲೆಯಾಗುತ್ತಿದೆ. ಮೊದಲು ಇದನ್ನು ತಡೆಯಲು ಎಂದು ಹೇಳಿದ್ದಾರೆ.

Comments are closed.