ರಾಷ್ಟ್ರೀಯ

ಪಾಕ್‌ಗೆ ಮರಳಲು ದಾಖಲೆ ಕೊಡಲು ಮಹಿಳೆಯರಿಂದ ಮೋದಿಗೆ ಮನವಿ

Pinterest LinkedIn Tumblr

ಶ್ರೀನಗರ: 18 ವರ್ಷದ ಹಿಂದೆ ಒಮರ್‌ ಅಬ್ದುಲ್ಲಾ ಸರಕಾರದ ‘ಉಗ್ರಗಾಮಿಗಳಿಗೆ ಪುನರ್ವಸತಿ ಒದಗಿಸುವ ನೀತಿ’ಯಡಿ ಭಾರತದಲ್ಲಿ ಆಶ್ರಯ ಪಡೆದ ಕುಟುಂಬಗಳು ಇದೀಗ ಮರಳಿ ಪಾಕಿಗೆ ಹೋಗಲು ದಾಖಲೆ ಕೇಳಿ ಮನವಿ ಮಾಡಿವೆ.

ಅಂದು ಭರವಸೆ ನೀಡಿದಂತೆ ಕಾಯಂ ವಾಸ್ತವ್ಯದ ಪ್ರಮಾಣ ಪತ್ರ ನೀಡಲಾಗಿಲ್ಲ. ಹಾಗಾಗಿ ತಾವು ಪಾಕಿಸ್ತಾನಕ್ಕೆ ಮರಳಲು ಬಯಸಿದ್ದು, ಅದಕ್ಕಾಗಿ ಪ್ರಯಾಣಕ್ಕೆ ಪೂರಕವಾದ ದಾಖಲೆ ನೀಡುವಂತೆ ಮಹಿಳೆಯರ ತಂಡವೊಂದು ಎರಡು ದೇಶಗಳ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಇಮ್ರಾನ್‌ ಖಾನ್‌ ಅವರನ್ನು ವಿನಂತಿಸಿದೆ.

ಈ ಕುಟುಂಬಗಳು ಆಗ ಶಸ್ತ್ರಾಸ್ತ್ರ ತರಬೇತಿಗಾಗಿ ಗಡಿ ದಾಟಿ ಬಂದಿತ್ತು. ಇಲ್ಲಿ ಶರಣಾಗತವಾದವರಿಗೆ ಆಶ್ರಯ ನೀಡಲಾಗಿತ್ತು.

Comments are closed.