ರಾಷ್ಟ್ರೀಯ

ಮದುವೆಯಾದ ಅರ್ಧ ಗಂಟೆಯಲ್ಲೇ ವಿಚ್ಛೇದನ 

Pinterest LinkedIn Tumblr


ಅಹಮದಾಬಾದ್: ಹಿಂದೆಂದೂ ನಡೆದಿರಲಾರದ ಘಟನೆಯೊಂದಕ್ಕೆ ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ಗೊಂದಲ್ ಸಾಕ್ಷಿಯಾಗಿದೆ. ಹೌದು, ಇಲ್ಲಿಯ ನವಜೋಡಿಯೊಂದು ವಿವಾಹವಾದ ಅರ್ಧ ಗಂಟೆಯಲ್ಲೇ ವಿಚ್ಛೇದನ ಪಡೆಯುವ ಮೂಲಕ ಹೊಸ ಸಂಬಂಧಕ್ಕೆ ಎಳ್ಳುನೀರು ಬಿಟ್ಟುಕೊಂಡಿದ್ದಾರೆ.

ವಿವಾಹದ ಬಳಿಕ ಊಟದ ವಿಷಯವಾಗಿ ವರ ಹಾಗೂ ವಧುವಿನ ಕಡೆಯವರಿಗೆ ಭಿನ್ನಾಭಿಪ್ರಾಯ ಹುಟ್ಟಿದ್ದು, ವಾಗ್ವಾದಕ್ಕೆ ಕಾರಣವಾಗಿದೆ. ಕೂಡಲೇ ಎರಡು ಕಡೆಯವರು ವಕೀಲರನ್ನು ಕರೆಯಿಸಿ, ನವ ದಂಪತಿಗೆ ವಿಚ್ಛೇದನ ಕೊಡಿಸಿದ್ದಾರೆ.

ವಿವಾಹದ ಬಳಿಕ ಪತ್ನಿಯ ಜತೆ ಹೀಗಿರಬೇಕು, ಹಾಗಿರಬೇಕು ಎಂದು ಕನಸು ಕಟ್ಟಿದ್ದ ವರ, ಕೈ ಹಿಡಿದವಳನ್ನು ಅರ್ಧ ಗಂಟೆಯಲ್ಲಿಯೇ ಬಿಟ್ಟು ಬರುವಂತಾಗಿದೆ.

ವಿವಾಹ ಮಂಟಪದಲ್ಲಿ ಏಳೇಳು ಜನ್ಮಗಳಲ್ಲೂ ಜೊತೆಯಾಗಿರುತ್ತೇನೆ ಎಂಬ ವಾಗ್ದಾನ ಮಾಡಿದ್ದ ದಂಪತಿ, ಕೇವಲ ಊಟದ ವಿಷಯಕ್ಕಾಗಿ ನಡೆದ ಗಲಾಟೆಯಿಂದ ನಡೆದ ಜಗಳದ ಪರಿಣಾಮ ಕೇವಲ ಅರ್ಧ ಗಂಟೆಯಲ್ಲಿಯೇ ಸಂಬಂಧ ಕಳೆದು ಕೊಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಮದುವೆ ಮನೆಯಲ್ಲಿ ಗಲಾಟೆ ತಾರಕಕ್ಕೇರುತ್ತಿದ್ದಂತೆ, ಯಾರೋ ಒಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ಪೊಲೀಸರು ಬಂದ ಬಳಿಕ ಜಗಳವೇನೋ ತಿಳಿಯಾಗಿತ್ತು. ಆದರೆ, ಉಭಯ ಪಕ್ಷದವರಲ್ಲಿ ಅಸಮಾಧಾನದ ಹೊಗೆ ಮಾತ್ರ ಕಡಿಮೆಯಾಗಿರಲಿಲ್ಲ. ಕೂಡಲೇ ವಕೀಲರನ್ನು ಕರೆಯಿಸಿ ವಿಚ್ಛೆದನ ನಿರ್ಧಾರ ತೆಗೆದುಕೊಂಡರು.

Comments are closed.