
ಪಟನಾ: ಕದ್ದು ಮುಚ್ಚಿ ನರಬಲಿ ಕೊಡುತ್ತಾರೆ ಅಂತ ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಬಾಬಾ ಎಂಜಿನಿಯರ್ ಆಗಿರುವ ತನ್ನ ಮಗನನ್ನು ದೇವರಿಗೆ ಬಲಿ ಕೊಡಲು ಆಡಳಿತದ ಅನುಮತಿ ಕೋರಿ ಪತ್ರ ಬರೆದಿದ್ದಾನೆ!
ಪಾಗ್ಲಾ ಬಾಬಾ(ಹುಚ್ಚ ಬಾಬಾ) ಎಂದೇ ಹೆಸರಾಗಿರುವ ಬೇಗುಸರಾಯಿಯ ಮೋಹನ್‌ಪುರ ಪಹಾಡ್‌ಪುರದ ಮಾಂತ್ರಿಕ ಸುರೇಂದ್ರ ಪ್ರಸಾದ್ ಸಿಂಗ್ ಈ ರೀತಿ ಮನವಿ ಮಾಡಿದವನು. ಆತ ಉಪವಿಭಾಗಾಧಿಕಾರಿಗೆ ಬರೆದ ಪತ್ರದ ವಿಡಿಯೊ ವೈರಲ್ ಆಗಿದೆ. ಆದರೆ, ಅಧಿಕಾರಿಗಳು ತಮಗೆ ಯಾವುದೇ ಪತ್ರ ಬಂದಿಲ್ಲ ಎಂದು ಹೇಳಿದ್ದಾರೆ.
‘ಬಿಂದು ಮಾ ಮಾನವ ಕಲ್ಯಾಣ ಸಂಸ್ಥೆ’ಯ ಲೆಟರ್ ಹೆಡ್‌ನಲ್ಲಿ ಈ ಪತ್ರ ಬರೆದಿದ್ದು, ಕಾಮಾಖ್ಯ ದೇವರು ನರಬಲಿ ಕೇಳಿದ್ದಾರೆ ಎಂದಿದ್ದಾನೆ. ಕೈಯಲ್ಲೊಂದು ತಲೆ ಬುರುಡೆ ಹಿಡಿದುಕೊಂಡು ನಗ್ನವಾಗಿ ಓಡಾಡುವ ಈತ ಮಾನವ ಬಲಿ ತಪ್ಪಲ್ಲ ಎನ್ನುತ್ತಾನೆ. ಬೇಕಿದ್ದರೆ ಮೊದಲು ಮಗನನ್ನೇ ಬಲಿ ಕೊಡುತ್ತೇನೆ ಎನ್ನುತ್ತಾನೆ.
ಅಸಲಿ ವಿಷಯವೇನೆಂದರೆ, ಎಂಜಿನಿಯರ್ ಆಗಿರುವ ಮಗ ಸಂಜೀವ್ ಕುಮಾರ್ ದೇವಳಕ್ಕೆ ಹಣ ಕೊಡಲು ನಿರಾಕರಿಸಿದ್ದಾನಂತೆ. ಇದೀಗ ನರಬಲಿ ಹೆಸರಲ್ಲಿ ಅವನನ್ನು ಮುಗಿಸುವುದು ಈ ಮಂತ್ರವಾದಿಯ ಪ್ಲ್ಯಾನ್. ಅಧಿಕಾರಿಗಳು ಆತನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
Comments are closed.