ರಾಷ್ಟ್ರೀಯ

ಹೃದಯಾಘಾತಕ್ಕೊಳಗಾದ ಮಾಲೀಕನನ್ನು ರಕ್ಷಿಸಿದ ಸಾಕುನಾಯಿ

Pinterest LinkedIn Tumblr


ಪುಣೆ: ನಾಯಿ ಮನುಷ್ಯನ ಬೆಸ್ಟ್ ಫ್ರೆಂಡ್ ಎನ್ನುತ್ತಾರೆ. ಅದನ್ನು ಸಾಬೀತು ಪಡಿಸುವ ನಿದರ್ಶನಗಳು ಆಗಾಗ ಗೋಚರಿಸುತ್ತಲೇ ಇರುತ್ತವೆ. ಅದಕ್ಕೊಂದು ಉತ್ತಮ ನಿದರ್ಶನ ಈ ಆಶ್ಚರ್ಯಕಾರಿ ಘಟನೆ. ಹೃದಯಾಘಾತಕ್ಕೊಳಗಾದ ಮಾಲೀಕನನ್ನು ಆತನ ಸಾಕುನಾಯಿ ರಕ್ಷಿಸಿದ ಪ್ರಸಂಗ ಪುಣೆಯಲ್ಲಿ ನಡೆದಿದೆ.

ಅಷ್ಟಕ್ಕೂ ನಡೆದಿದ್ದೇನು?

ವೃತ್ತಿಯಲ್ಲಿ ವೈದ್ಯರಾಗಿರುವ 65 ವರ್ಷದ ರಮೇಶ್ ಸಂಚೇತಿ ಎನ್ನುವವರು ಪುಣೆಯ ನಿವಾಸಿಯಾಗಿದ್ದು ಜನವರಿ 23 ಮಧ್ಯಾಹ್ನ 12.30 ರ ಸುಮಾರಿಗೆ ಅವರಿಗೆ ಪಾರ್ಶ್ವವಾಯು ಬಡಿಯಿತು. ಅಷ್ಟೇ ಅಲ್ಲ ಹೃದಯಾಘಾತವೂ ಆಯ್ತು. ಆದರೆ ಮನೆಯಲ್ಲಿ ಆ ಸಂದರ್ಭದಲ್ಲಿ ನಾಯಿ ಬ್ರೂನಿ ಮತ್ತು ಅವರನ್ನು ಬಿಟ್ಟರೆ ಯಾರು ಕೂಡ ಇರಲಿಲ್ಲ. ಸ್ವಲ್ಪ ಸಮಯದಲ್ಲಿ ನೆರೆಮನೆಯ ಅಮಿತ್ ಶಾ ಎನ್ನುವವರು ಬ್ರೂನಿಗೆ ಆಹಾರ ನೀಡಲು ಬಂದಿದ್ದು, ಆದರೆ ಅವಳು ತಿನ್ನಲು ನಿರಾಕರಿಸಿದ್ದಾನೆ. ತನ್ನ ಮಾಲೀಕನ ಕೋಣೆಯ ಕಿಟಕಿ ಬಳಿ ಆತಂಕದಿಂದ ಓಡಾಡಲು ಆರಂಭಿಸಿದ್ದಾಳೆ. ಇದರಿಂದ ಶಾಗೆ ಎಲ್ಲವೂ ಸರಿಯಾಗಿಲ್ಲ ಎನ್ನುವ ಸಂದೇಹ ಬಲವಾಗಿದ್ದು ಕಿಟಕಿಯಿಂದ ಬಗ್ಗಿ ನೋಡಿದಾಗ ಸಂಚೇತಿ ಕುಸಿದು ಬಿದ್ದಿರುವುದು ಕಾಣಿಸಿದೆ. ತಕ್ಷಣ ಕದ ಒಡೆದ ಶಾ ಸಂಚೇತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ವೃದ್ಧಾಪ್ಯದಿಂದಾಗಿ ಏಳಲಾಗದ ಸ್ಥಿತಿಯಲ್ಲಿದ್ದರೂ ಬ್ರೂನಿ ಎದ್ದು ಗಾಬರಿಯಿಂದ ಓಡಾಡತೊಡಗಿದಳು. ಕಿಟಕಿ ಮೇಲೆ ಕಾಲಿಟ್ಟು ಬ್ರೂನಿ ಒಳಗೆ ನೋಡತೊಡಗಿದಳು. ಮೊದಲು ನನಗೆ ಸ್ವಲ್ಪ ಗೊಂದಲವಾಯಿತು. ಆದರೆ ಕಿಟಕಿ ಬಳಿ ಹೋಗಿ ನೋಡಿದಾಗ ನಡೆದಿರುವ ದುರಂತ ಸ್ಪಷ್ಟವಾಯಿತು. ವೈದ್ಯರು ನೆಲದ ಮೇಲೆ ಬಿದ್ದಿದ್ದರು. ಘಟನೆ ನಡೆದಾಗ ಸಂಚೇತಿ ಪತ್ನಿ ಮುಂಬೈನಲ್ಲಿದ್ದರು. ಪುತ್ರ ಬದ್ವಾನ್‌ನಲ್ಲಿದ್ದು, ಪುತ್ರಿ ಅಮೆರಿಕಾದಲ್ಲಿದ್ದಾಳೆ ಎಂದು ಶಾ ತಿಳಿಸಿದ್ದಾರೆ.

ಬ್ರೂನಿ ಚಿಕ್ಕ ಮರಿ ಇದ್ದಾಗ (16 ವರ್ಷದ ಹಿಂದೆ) ಸಂಚೇತಿ ಮತ್ತು ಶಾ ಅದನ್ನು ಮನೆಗೆ ತಂದು ಸಾಕತೊಡಗಿದ್ದರು. ಎರಡು ವರ್ಷದ ಹಿಂದೆ ಅವಳಿಗೆ ಕಿಡ್ನಿ ವೈಫಲ್ಯವಾಗಿತ್ತು. ಆದರೆ ಸೂಕ್ತ ಚಿಕತ್ಸೆ ಕೊಡಿಸಿ ಉಳಿಸಿಕೊಳ್ಳಲಾಗಿತ್ತು.

ವೃದ್ಧಾಪ್ಯಕ್ಕೆ ಜಾರಿದ ಬಳಿಕ ನಾಯಿಗಳನ್ನು ಸಾಮಾನ್ಯವಾಗಿ ಹಿರಿಯ ನಾಗರಿಕರನ್ನು ಅಲಕ್ಷ ಮಾಡಿದ ಹಾಗೆ ಮಾಡಲಾಗುತ್ತದೆ. ಅವರನ್ನು ಭಾರ ಎಂಬಂತೆ ನೋಡಲಾಗುತ್ತದೆ. ಅವುಗಳಿಗೆ ಪ್ರೀತಿ, ಕಾಳಜಿಯ ಅವಶ್ಯಕತೆ ಇದೆ. ಸಂಚೇತಿ ಮಾಡಿದ್ದು ಅದನ್ನೇ. ಅದಕ್ಕೆ ಪ್ರತಿಯಾಗಿ ಬ್ರೂನಿ ಅವರ ಜೀವವನ್ನುಳಿಸಿದೆ.

Comments are closed.