ರಾಷ್ಟ್ರೀಯ

ಈ ಬಾರಿ 10, 977ಕೋಟಿ ರೂಪಾಯಿ ದಾಖಲೆಯತ್ತ ದಕ್ಷಿಣ ಮಧ್ಯ ರೈಲ್ವೆ

Pinterest LinkedIn Tumblr

ಹೈದರಾಬಾದ್.ಜ.27 : ದಕ್ಷಿಣ ಮಧ್ಯ ರೈಲ್ವೆ 10, 977ಕೋಟಿ ರೂಪಾಯಿ ದಾಖಲೆಯ ಲಾಭಗಳಿಸಿದ್ದು, ಕಳೆದ ವರ್ಷದ ಆದಾಯಕ್ಕಿಂತ 1, 505 ಕೋಟಿ ರೂ.ಹೆಚ್ಚಾಗಿದೆ ಎಂದು ಇಲಾಖೆಯ ಅಡಿಷನಲ್ ಜನರಲ್‌ ಮ್ಯಾನೇಜರ್‌ ಜಾನ್ ಥಾಮಸ್ ತಿಳಿಸಿದ್ದಾರೆ.

ಗಣರಾಜ್ಯದ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಮೂಲಭೂತ ಸೌಕರ್ಯ ಮತ್ತು ಯೋಜನೆಗಳನ್ನು ಸಕಾಲದಲ್ಲಿ ಮುಗಿಸಲು ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಯಾಣಿಕರಿಗೆ ಭದ್ರತೆ ಮತ್ತು ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಾಮುಖ್ಯತೆ ನೀಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, 50 ಕಿಲೋಮೀಟರ್ ಜೋಡಿ ಮಾರ್ಗ ನಿರ್ಮಾಣ ಮಾಡಲಾಗಿದೆ. ಅಲ್ಲದೆ 261 ಕಿಲೋಮೀಟರ್ ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ.

ಪರಿಸರ ಸಂರಕ್ಷಣೆ ಗೆ ಹೆಚ್ಚಿನ ಒತ್ತು ನೀಡಿದ್ದು, ಜಲ ಸಂರಕ್ಷಣೆ, ಕೆಲಸದ ಸ್ಥಳಗಳಲ್ಲಿ ಸಂಪೂರ್ಣ ಹಸಿರು ವಾತಾವರಣ, ಪರಿಸರ ಅಭಿವೃದ್ಧಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಶುಚಿತ್ವ ಕಾಪಾಡಿಕೊಂಡು ಬರಲಾಗಿದೆ ಎಂದು ಹೇಳಿದರು.

ಸಿಕಿಂದ್ರಾಬಾದ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ದಕ್ಷಿಣ ಮಧ್ಯ ರೈಲ್ವೆಯು ಕಳೆದ ವರ್ಷ ಸಂಪೂರ್ಣ ವಿದ್ಯುತ್ ಉಳಿತಾಯ ಮಾಡುತ್ತಿರುವ ದೇಶದ ಮೊದಲ ರೈಲ್ವೆ ವಿಭಾಗ ಎಂಬ ಹೆಗ್ಗಳಿಕೆ ಮುಡಿಗೇರಿಸಿಕೊಂಡಿತ್ತು.

ತೆಲಂಗಾಣ, ಕರ್ನಾಟಕ ಮತ್ತು ಆಂಧ್ರದ ನಾನಾ ಜಿಲ್ಲೆಗಳಲ್ಲಿ ವ್ಯಾಪ್ತಿ ಹೊಂದಿರುವ ದಕ್ಷಿಣ ಮಧ್ಯ ರೈಲ್ವೆ ಒಟ್ಟು 733 ರೈಲು ನಿಲ್ದಾಣಗಳನ್ನು ಹೊಂದಿದೆ. ಕಳೆದ ಮಾರ್ಚ್‌ನಲ್ಲಿಯೇ ಈ ಎಲ್ಲಾ ರೈಲು ನಿಲ್ದಾಣಗಳಲ್ಲಿ ಎಲ್‌ಇಡಿ ಬಲ್ಬ್ ಬಳಸುತ್ತ ವಿದ್ಯುತ್ ಮಿತವ್ಯಯ ಸಾಧಿಸಲಾಗಿದೆ.

Comments are closed.