ರಾಷ್ಟ್ರೀಯ

ಮೈನಸ್​ 30 ಡಿಗ್ರಿ ತಾಪಮಾನದ ನಡುವೇ ತ್ರಿವರ್ಣ ಧ್ವಜ ಹಾರಿಸಿದ ಯೋಧರು

Pinterest LinkedIn Tumblr


ನವದೆಹಲಿ: ದೇಶಾದ್ಯಂತ 70ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಅತ್ತ ಇಂಡೋ- ಟಿಬೆಟಿಯನ್​ ಗಡಿಯಲ್ಲೂ ಭಾರತೀಯ ಸೇನೆಯ ಯೋಧರು ಮೈನಸ್​ 30 ಡಿಗ್ರಿ ತಾಪಮಾನದ ನಡುವೆ ಧ್ವಜಾರೋಹಣ ಮಾಡಿ ಸಂಭ್ರಮಿಸಿದ್ದಾರೆ.
ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಎಂದೇ ಖ್ಯಾತಿ ಗಳಿಸಿರುವ ಲಡಾಖ್ ನಲ್ಲೂ ಭಾರತೀಯ ಯೋಧರು ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ 70ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆ ಮಾಡಿದರು. ಸಮುದ್ರ ಮಟ್ಟದಿಂದ ಸುಮಾರು18 ಸಾವಿರ ಅಡಿ ಎತ್ತರದ ಲಡಾಖ್ ಯುದ್ಧ ಭೂಮಿಯಲ್ಲಿ ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಧ್ವಜಾರೋಹಣ ಮಾಡಿದರು. ಈ ಪ್ರದೇಶ ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಎಂದೇ ಖ್ಯಾತಿಗಳಿಸಿದ್ದು, ಮೈನಸ್ 30 ಡಿಗ್ರಿ ತಾಪಮಾನ ಹೊಂದಿದೆ. ಇಂತಹ ರಣ ಭಯಂಕರ ಚಳಿಯ ನಡುವೆಯೇ ಸೈನಿಕರು ಧ್ವಜಾರೋಹಣ ಮಾಡಿ ತಮ್ಮ ದೇಶ ಪ್ರೇಮ ಮೆರೆದಿದ್ದಾರೆ.
ಅಟ್ಟಾರಿ-ವಾಘಾ ಗಡಿಯಲ್ಲಿ ಸೈನಿಕರಿಂದ ಸಿಹಿ ಹಂಚಿಕೆ
ಇನ್ನು ಗಣರಾಜ್ಯೋತ್ಸವ ಸಂಭ್ರಮಾಚರಣೆ ನಿಮಿತ್ತ ಇಂಡೋ-ಪಾಕ್ ಗಡಿಯಲ್ಲಿ ಭಾರತೀಯ ಸೈನಿಕರು ಪಾಕಿಸ್ತಾನದ ಸೈನಿಕಾಧಿಕಾರಿಗಳಿಗೆ ಸಿಹಿ ತಿನ್ನಿಸುವ ಮೂಲಕ ಸೌಹಾರ್ಧತೆ ಮೆರೆದಿದ್ದಾರೆ. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಪಾಕಿಸ್ತಾನಿ ಸೈನಿಕರಿಗೆ ಇಂದು ಬೆಳಗ್ಗೆ ಸಿಹಿ ತಿನ್ನಿಸಿದರು. ಅಲ್ಲದೆ ಪಾಕ್ ಸೇನಾಧಿಕಾರಿಗಳೂ ಕೂಡ ಭಾರತೀಯ ಅಧಿಕಾರಿಗಳಿಗೆ ಶುಭಾಶಯ ಕೋರಿದರು.

Comments are closed.