ರಾಷ್ಟ್ರೀಯ

ಗಣರಾಜ್ಯೋತ್ಸವದಲ್ಲಿ ರಾಹುಲ್ ಗಾಂಧಿ ಎಲ್ಲಿ ಕುಳಿತ್ತಿದ್ದರು ಗೊತ್ತಾ?

Pinterest LinkedIn Tumblr


ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಳೆದ ವರ್ಷದ 69ನೇ ಗಣರಾಜ್ಯೋತ್ಸವ ಪರೇಡನ್ನು 6ನೇ ಸಾಲಿನಲ್ಲಿ ಕುಳಿತು ಜನಸಾಮಾನ್ಯರಂತೆ ವೀಕ್ಷಣೆ ಮಾಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನರೇಂದ್ರ ಮೋದಿ ಸರ್ಕಾರ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿತ್ತು.

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ರಾಹುಲ್ ಗಾಂಧಿಗೆ ಮೊದಲ ಸಾಲಿನಲ್ಲೇ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇಂದ್ರ ಸಚಿವ ನಿತಿನ್ ಗಡ್ಕರಿ ಪಕ್ಕದಲ್ಲೇ ಅವರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಮೊದಲ ಸಾಲಿನಲ್ಲಿ ತಮಗೆ ನೀಡಲಾಗಿದ್ದ ಆಸನದಲ್ಲಿ ಕುಳಿತುಕೊಂಡು ಅವರು ಪರೇಡ್ ವೀಕ್ಷಣೆ ಮಾಡಿದ್ದರು.

ಪ್ರತಿಬಾರಿಯ ಗಣರಾಜ್ಯೋತ್ಸವದ ವೇಳೆ ಕಾಂಗ್ರೆಸ್ ಅಧ್ಯಕ್ಷರಿಗೆ ಎಲ್ಲ ಬಾರಿಯೂ ಗಣ್ಯರ ಆಸನ ವ್ಯವಸ್ಥೆಯಲ್ಲಿ ಮೊದಲ ಸಾಲು ನೀಡಲಾಗುತ್ತಿತ್ತು. ಆದರೆ ಕಳೆದ ವರ್ಷ ಮಾತ್ರ ಅವರಿಗೆ 6ನೇ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಿದ್ದರಿಂದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಸಹ ವ್ಯಕ್ತವಾಗಿತ್ತು.

Comments are closed.