ರಾಷ್ಟ್ರೀಯ

ಪ್ರಿಯಾಂಕಾ ಗಾಂಧಿ ರಾಜಕೀಯ ಅನುಭವವಿಲ್ಲದ ಸುಂದರಿ: ಬಿಹಾರ ಸಚಿವ ವ್ಯಂಗ್ಯ

Pinterest LinkedIn Tumblr


ನವದೆಹಲಿ: ‘ಪ್ರಿಯಾಂಕಾ ಗಾಂಧಿ ಕೇವಲ ಸುಂದರವಾಗಿದ್ದಾರೆ ಅಷ್ಟೇ. ಆದರೆ ಅವರು ಯಾವುದೇ ರಾಜಕೀಯ ಸಾಧನೆ ಮಾಡಿಲ್ಲ’ ಎಂದು ಬಿಹಾರ ಸಚಿವ ವಿನೋದ್​ ನಾರಾಯಣ್​ ಜಾ ವ್ಯಂಗ್ಯ ಮಾಡಿದ್ದಾರೆ.

ಹಲವು ವರ್ಷಗಳ ಬಳಿಕ ಸಕ್ರಿಯ ರಾಜಕಾರಣಕ್ಕೆ ಅಧಿಕೃತವಾಗಿ ಪ್ರವೇಶಿಸಿರುವ ಪ್ರಿಯಾಂಕಾ ಗಾಂಧಿ ಬಗ್ಗೆ ಬಿಜೆಪಿ ನಾಯಕ ಈ ಹೇಳಿಕೆ ನೀಡಿದ್ದಾರೆ. ‘ಪ್ರಿಯಾಂಕಾ ಗಾಂಧಿ ತುಂಬಾ ಸುಂದರವಾಗಿದ್ದಾರೆ. ಆದರೆ ನಾನು ನೋಡಿರುವ ಪ್ರಕಾರ, ಅವರಿಗೆ ರಾಜಕೀಯ ಅನುಭವವಾಗಲೀ ಅಥವಾ ಬೇರಾವುದೇ ಪ್ರತಿಭೆಯಾಗಲಿ ಇಲ್ಲ’ ಎಂದಿದ್ದಾರೆ.

ಪ್ರಿಯಾಂಕಾ ಗಾಂಧಿಗೆ ಈಗ 44 ವರ್ಷಕ್ಕಿಂತ ಹೆಚ್ಚಿರಬಹುದು. ಆದರೆ ಈವರೆಗೆ ಅವರು ಯಾವುದೇ ರಾಜಕೀಯ ಸಾಧನೆ ಮಾಡಿಲ್ಲ. ಅವರು ನೋಡಲು ಸುಂದರವಾಗಿದ್ದರಷ್ಟೇ. ಅದು ದೇವರು ಕೊಟ್ಟಿರುವ ಉಡುಗೊರೆ. ಆದರೆ ಇಲ್ಲಿವರೆಗೆ ಯಾವುದೇ ಮಹತ್ಕಾರ್ಯ ಸಾಧಿಸಿಲ್ಲ ಎಂದು ಟೀಕಿಸಿದ್ಧಾರೆ.

ಕಳೆದ ವಾರ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ 47 ವರ್ಷದ ಪ್ರಿಯಾಂಕಾ ಗಾಂಧಿ ಬಗ್ಗೆ ಮಾತನಾಡಿದ ಸಚಿವರಲ್ಲಿ ವಿನೋದ್​ ನಾರಾಯಣ್​ ಮೊದಲಿಗರಲ್ಲ. ಬಿಹಾರದ ಉಪಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಸುಶಿಲ್​ ಮೋದಿ ಕೂಡ ಪ್ರಿಯಾಂಕಾ ಗಾಂಧಿ ಅವರನ್ನು ಗುರಿಯಾಗಿಸಿ ಮಾತನಾಡಿದ್ದರು.

ದೋಷಪೂರಿತ ಬಾಳಸಂಗಾತಿಯನ್ನು ಹೊಂದಿರುವ ಮಹಿಳೆಯನ್ನು ಕಾಂಗ್ರೆಸ್​ಗೆ ಸೇರಿಸಿಕೊಳ್ಳುವ ಮೂಲಕ ಪಕ್ಷವು ಬಹಳ ಸಂತೋಷಪಟ್ಟಿದೆ ಎಂದು ವ್ಯಂಗ್ಯ ಮಾಡಿದ್ದರು. ಅಷ್ಟೇ ಅಲ್ಲದೇ, ಪ್ರಿಯಾಂಕಾ ಗಾಂಧಿ ಅವರು ಆಕೆಯ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನೇ ಹೋಲುತ್ತಾರೆ ಎಂಬ ಮಾತನ್ನು ಅಲ್ಲಗಳೆದಿದ್ದರು.

ಒಬ್ಬ ವ್ಯಕ್ತಿ ಬೇರೆಯವರನ್ನು ಹೋಲುವ ಮೂಲಕ ಅವರಂತೆಯೇ ಸಮರ್ಥರಾಗಿರುತ್ತಾರೆ ಎನ್ನುವುದಾದರೆ, ವಿರಾಟ್​ ಕೊಹ್ಲಿ ಮತ್ತು ಅಮಿತಾಬ್​ ಬಚ್ಚನ್​ನಂತಹ ಅನೇಕರು ನಮಗೆ ಕಾಣಸಿಗುತ್ತಾರೆ. ನಕಲಿಗಳು ರಾಜಕೀಯದಲ್ಲಿ ಕೆಲಸ ಮಾಡುವುದಿಲ್ಲ. ಪ್ರಿಯಾಂಕಾ ಗಾಂಧಿ ಇಂದಿರಾ ಗಾಂಧಿಯನ್ನೇ ಹೋಲುತ್ತಾರೆ ಎಂದಾದರೂ, ಅಲ್ಲಿ ದೊಡ್ಡ ವ್ಯತ್ಯಾಸ ಇದೆ ಎಂದು ಹೇಳಿದ್ದರು.

ಪ್ರಿಯಾಂಕಾ ಗಾಂಧಿ ಗಂಡ ರಾಬರ್ಟ್​ ವಾದ್ರಾ ಭೂ ಅವ್ಯವಹಾರ ಆರೋಪ ಮತ್ತು ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇಂತಹ ಆರೋಪ ಹೊತ್ತಿರುವ ಬಾಳಸಂಗಾತಿಯನ್ನು ಹೊಂದಿರುವ ಮಹಿಳೆಯನ್ನು ಕಾಂಗ್ರೆಸ್ ತನ್ನ ಪಕ್ಷಕ್ಕೆ​ ಸೇರಿಸಿಕೊಳ್ಳುತ್ತದೆ ಎಂದರೆ, ಇದು ಬಹಳ ಸ್ವಾಗತಾರ್ಹ ಎಂದು ವ್ಯಂಗ್ಯ ಮಾಡಿದ್ದರು.

Comments are closed.