ರಾಷ್ಟ್ರೀಯ

ಭಾರತ ರತ್ನ ಪಟ್ಟಿ ಪ್ರಕಟ: ಸಿದ್ದಗಂಗಾ ಶ್ರೀಗಳಿಗೆ ಇಲ್ಲದ ಗೌರವ!

Pinterest LinkedIn Tumblr


ನವದೆಹಲಿ: ಬಹುನಿರೀಕ್ಷಿತ ಭಾರತ ರತ್ನ ಪ್ರಶಸ್ತಿ ಪಟ್ಟಿಯನ್ನು ಕೇಂದ್ರ ಬಿಡುಗಡೆ ಮಾಡಿದ್ದು, ನಡೆದಾಡುವ ದೇವರು ಶ್ರೀ ಸಿದ್ದಗಂಗಾ ಶ್ರೀಗಳಿಗೆ ಈ ಬಾರಿಯೂ ನೀಡಿಲ್ಲ. ಸಿದ್ದಗಂಗಾ ಶ್ರೀಗಳ ಆರೋಗ್ಯ ಹದಗೆಟ್ಟ ದಿನದಿಂದಲೂ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿ ಬಂದಿತ್ತು. ನ್ಯೂಸ್​ 18 ಕನ್ನಡ ಕೂಡ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೋರಿ ಕ್ಯಾಂಪೇನ್​ ಆರಂಭಿಸಿತ್ತು.

ಲಕ್ಷಾಂತರ ಭಕ್ತರ ಆಶಯವೂ ಆಗಿತ್ತು. ಜತೆಗೆ ಶ್ರೀಗಳು ದಶಕಗಳಿಂದ ಮಾಡಿಕೊಂಡು ಬಂದ ನಿಸ್ವಾರ್ಥ ಸೇವೆಗೆ ದೇಶದ ಅತ್ಯುನ್ನತ ಪ್ರಶಸ್ತಿ ಸಿಗಬೇಕು ಎಂಬ ಆಶಯ ಎಲ್ಲರದಾಗಿತ್ತು. ಕಳೆದ ಕೆಲ ವರ್ಷಗಳಿಂದ ಸಾರ್ವಜನಿಕವಾಗಿ ಈ ಬೇಡಿಕೆ ಕೇಳಿ ಬರುತ್ತಲೇ ಇದೆ.

ಯಾರಿಗೆ ಈ ಬಾರಿ ಪ್ರಶಸ್ತಿ:

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಭಾರತರತ್ನ ನಾನಾಜಿ ದೇಶ್ಮುಖ್​ಗೆ ಮರಣೋತ್ತರ ಭಾರತರತ್ನ, ಭೂಪೇನ್ ಹಜಾರಿಕಾಗೆ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ಕೇಂದ್ರ ಘೋಷಿಸಿದೆ. ನಾನಾಜಿ ದೇಶ್ಮುಖ್​ ಸಮಾಜ ಸುಧಾರಕರು. ದಶಕಗಳ ಕಾಲ ದೇಶಕ್ಕಾಗಿ ಶ್ರಮಿಸಿದ್ದವರು. ಭೂಪೇನ್ ಹಜಾರಿಕಾ ಪ್ರಸಿದ್ಧ ಗಾಯಕರಾಗಿದ್ದವರು. ಅವರ ಹಾಡುಗಳು ಇಂದಿಗೂ ಜನಜನಿತ.

Comments are closed.