ರಾಷ್ಟ್ರೀಯ

​ಮೋದಿಗೆ ಬಹುಮತ, ರಾಹುಲ್​ಗೆ ಹಿನ್ನಡೆ!: ಫಸ್ಟ್​ಪೋಸ್ಟ್​ ಸಮೀಕ್ಷೆ

Pinterest LinkedIn Tumblr


ನವದೆಹಲಿ: ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಾರಿಯೂ ಮತ್ತೆ ಗೆಲ್ಲುವ ಭರವಸೆಯಲ್ಲಿದೆ. ಈ ಮಧ್ಯೆ ಒಂದರ ಮೇಲೆ ಒಂದರಂತೆ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರ ಬೀಳುತ್ತಿವೆ. ಈಗ ಫಸ್ಟ್​​ಪೋಸ್ಟ್​ ನಡೆಸಿದ ‘ನ್ಯಾಷನಲ್​ ಟ್ರಸ್ಟ್​​ ಸರ್ವೆ’ ಬಹಿರಂಗ ಗೊಂಡಿದ್ದು, ಪ್ರಧಾನಿ ಮೋದಿ ವರ್ಚಸ್ಸಿಗೆ ಯಾವುದೇ ಕುತ್ತು ಎದುರಾಗದು ಎಂದು ಹೇಳಿದೆ.

ಭಾರತದ 23 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಒಟ್ಟು ಲೋಕಸಭಾ ಕ್ಷೇತ್ರಗಳ ಪೈಕಿ ಶೇ. 60 ಕ್ಷೇತ್ರಗಳನ್ನು ಈ ಸಮೀಕ್ಷೆ ಒಳಗೊಂಡಿದೆ. ಈ ಪೈಕಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಉತ್ತಮ ಎಂದು ಶೇ. 52.2 ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ. 26.8 ಜನರು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಪರ ಒಲವು ತೋರಿದ್ದಾರೆ.

ಇನ್ನು, ಪ್ರಧಾನಿ ಹುದ್ದೆ ರೇಸ್​ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿ ಮೊದಲಾದವರ ಹೆಸರು ಕೇಳಿಬಂದಿತ್ತು. ಅವರ ಪರ ಬೆರಳೆಣಿಕೆಯಷ್ಟು ಜನ ಒಲವು ತೋರಿದ್ದಾರೆ. ಮಮತಾ ಪರ ಶೇ. 4.2, ಮಾಯವತಿ ಶೇ.2.8, ಪ್ರಿಯಾಂಕಾ ಗಾಂಧಿ ಶೇ.0.9 ಮತ ಚಲಾಯಿಸಿದ್ದಾರೆ.

ಇನ್ನು, ಜೆಡಿಎಸ್​ ವರಿಷ್ಠ ಎಚ್​ಡಿ ದೇವೆಗೌಡ ಅವರ ಪ್ರಧಾನಿಯಾಗಲಿ ಎಂದು ಕೇವಲ 0.7 ಜನರು ಮಾತ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಶೇ. 8 ಜನರು ಹೇಳಿದ್ದಾರೆ.

ಭ್ರಷ್ಟಾಚಾರ ತಡೆ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಮೊದಲಿನಿಂದಲೂ ಹೇಳುತ್ತಲೇ ಬರುತ್ತಿದ್ದಾರೆ. ಈ ವಿಚಾರವಾಗಿ ಸಮೀಕ್ಷೆಯಲ್ಲಿ ಜನರು ಮೋದಿ ಪರ ಬ್ಯಾಟ್ ಬೀಸಿದ್ದಾರೆ. ಭ್ರಷ್ಟಾಚಾರ ತಡೆ, ದೇಶದ ಬಗ್ಗೆ ಯಾರು ಹೆಚ್ಚು ಕಾಳಜಿ ಹೊಂದಿದ್ದಾರೆ, ಯಾರು ಬದಾಲಾವಣೆಯ ಹರಿಕಾರ ಮತ್ತಿತರ ಪ್ರಶ್ನೆಗಳಿಗೆ ರಾಹುಲ್​ಗಿಂತ ಮೋದಿಯೇ ಹೆಚ್ಚು ಅಂಕ ಗಿಟ್ಟಿಸಿಕೊಂಡಿದ್ದಾರೆ.

ಇನ್ನು, ಮಹಾ ಮೈತ್ರಿಕೂಟ ರಚನೆಯಾದ ಕಾರಣ ಎನ್​ಡಿಎ ಸರ್ಕಾರಕ್ಕೆ ಹಿನ್ನಡೆಯಗಾಲಿದೆ ಎನ್ನುವ ಮಾತು ಕೇಳಿ ಬಂದಿದ್ದವು. ಆದರೆ, ಈ ಸಮೀಕ್ಷೆ ಅದನ್ನು ಸುಳ್ಳು ಮಾಡಿದೆ. ಎನ್​ಡಿಎ ಮೈತ್ರಕೂಟದ ಪರ ಶೇ.58 ಜನರು ಹಾಗೂ ಮಹಾಮೈತ್ರಿ ಪರ ಶೇ. 42 ಜರನು ಒಲವು ತೋರಿದ್ದಾರೆ.

Comments are closed.