ರಾಷ್ಟ್ರೀಯ

ಶ್ರೇಷ್ಠ ಕವಯಿತ್ರಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತೆ ಕೃಷ್ಣ ಶೋಭಿತ್ ವಿಧಿವಶ

Pinterest LinkedIn Tumblr

ನವದೆಹಲಿ, ಜ. 25- ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿಂದಿ ಸಾಹಿತ್ಯ ಲೋಕದ ಶ್ರೇಷ್ಠ ಕವಯಿತ್ರಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತೆ ಕೃಷ್ಣ ಶೋಭಿತ್ (93) ಅವರು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.

ಹಿಂದಿ ಸಾಹಿತ್ಯ ಲೋಕಕ್ಕೆ ಆಧುನಿಕ ಸ್ಪರ್ಶವನ್ನು ನೀಡಿದ ಕೃಷ್ಣ ಶೋಭಿತ್ ಅವರು ಬಾಲವಿವಾಹ ಹಾಗೂ ಪಂಜಾಬ್‍ನಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯಗಳ ವಿರುದ್ಧ ಹೋರಾಟಗಳನ್ನು ಮಾಡಿದ್ದರು.

ತಮ್ಮ ಮಿತ್ರೋ ಮರ್‍ಜಾಯೆ ಪುಸ್ತಕದಲ್ಲಿ ಬಾಲ್ಯ ವಿವಾಹ ಹಾಗೂ ಪಂಜಾಬ್‍ನ ಗ್ರಾಮೀಣ ಭಾಗ

ದರ್ ಸೆ ಬಿಚ್ಚೋರಿ, ಸುರ್ಜ್‍ಮುಖಿ ಅಂಧೆರಾ ಕಿ, ಯಾರೋನ್ ಕಿ ಯಾರ್, ಜಿಂದಗಿನಾಮಾ ನಫಿಸಾಳ ಕಿರುಕತೆಗಳು, ಸಿಖ್ ಬದಲ್ ಗಯಾ ಮತ್ತು ಬದಲೋಮ್ ಕೆ ಗಿರ್ ಪ್ರಮುಖ ಪುಸ್ತಕಗಳಾಗಿ ಗುರುತಿಸಿಕೊಂಡಿವೆ.
ಸಾಹಿತ್ಯ ಕ್ಷೇತ್ರದಲ್ಲಿ ಶೋಭಿತಾ ಮಾಡಿದ ಕಲಾ ಸೇವೆಯನ್ನು ಗುರುತಿಸಿ 1980ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಜಿಂದಗಿನಾಮಾ ಎಂಬ ಪುಸ್ತಕಕ್ಕೆ 2017ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

Comments are closed.