ರಾಷ್ಟ್ರೀಯ

ಸದ್ದಿಲ್ಲದೇ ಕೆಲವು ಪ್ರಸಿದ್ಧ ಪಾಲಿಸಿಗಳನ್ನು ಸ್ಥಗಿತಗೊಳಿಸಿದ ಎಲ್‌ಐಸಿ ಕಂಪೆನಿ

Pinterest LinkedIn Tumblr

ದೇಶದ ಬಹುದೊಡ್ಡ ವಿಮಾ ಕಂಪೆನಿಯಾಗಿರುವ LICಯು ಸದ್ದಿಲ್ಲದೇ ತನ್ನ ಕೆಲವು ಪ್ರಸಿದ್ಧ ಪಾಲಿಸಿಗಳನ್ನು ಸ್ಥಗಿತಗೊಳಿಸಿದೆ. LIC ವೆಬ್ ಸೈಟಿನಲ್ಲಿ ನೀಡಿರುವ ಮಾಹಿತಿ ಅನ್ವಯ ಈವರೆಗೂ ಒಟ್ಟು 108 ಪಾಲಿಸಿಗಳನ್ನು ಸ್ಥಗಿತಗೊಳಿಸಿದೆ. ಹಾಗಾದ್ರೆ LIC ಈವರೆಗೆ ಯಾವೆಲ್ಲಾ ಪಾಲಿಸಿಗಳನ್ನು ಸ್ಥಗಿತಗೊಳಿಸಿದೆ. ಈಗಾಗಲೇ ಪಾಲಿಸಿ ಮಾಡಿಸಿಕೊಂಡ ಗ್ರಾಹಕರು ಏನು ಮಾಡಬೇಕು? ಈ ಕುರಿತಾದ ಮಾಹಿತಿ ಹೀಗಿದೆ.
ಯಾವೆಲ್ಲಾ ಪಾಲಿಸಿಗಳು ಸ್ಥಗಿತಗೊಂಡಿವೆ?

ಜೀವನ್​ ಸುಗಮ್​
ವಯಸ್ಕ ಪೆಂಶನ್​ ವಿಮಾ ಯೋಜನೆ
ಜೀವನ್​ ವೈಭವ್
ಜೀವನ್​ ಶಗುಣ್ ಯೋಜನೆ
ಜೀವನ್​ ವೃದ್ಧಿ
ಪರಿವರ್ತನಶೀಲ ಅವಧಿ ವಿಮಾ ಪಾಲಿಸಿ
ಫಾರ್ಚೂನ್​ ಪ್ಲಸ್ ಪ್ಲಾನ್​
ಹೆಲ್ತ್​ ಪ್ರೊಟೆಕ್ಷನ್​ ಪ್ಲಸ್​
ಮಾರ್ಕೆಟ್​ ಪ್ಲಸ್- I
ಜೀವನ್​ ಭಾರತಿ- I
ಜೀವನ್​ ಸುರಭಿ 20 ವರ್ಷ
ಪ್ರಾಫಿಟ್​ ಪ್ಲಸ್​
ಪ್ಲೆಕ್ಸಿ ಪ್ಲಸ್​
ಮನಿ ಪ್ಲಸ್​- I
ಚೈಲ್ಡ್​ ಫಾರ್ಚೂನ್​ ಪ್ಲಸ್​
ಜೀವನ್​ ಸಾಥೀ ಪ್ಲಸ್​
ಸಮೃದ್ಧಿ ಪ್ಲಸ್​
ಪೆಂನ್ಶನ್​ ಪ್ಲಸ್​
ಜೀವನ್​ ನಿಧಿ
ನವಜೀವನ್ ಧಾರಾ- I
ನಯೀ ಜೀವನ್ ಸುರಕ್ಷಾ- I
ಹೆಲ್ತ ಪ್ಲಸ್​
ವೆಲ್ತ್​ ಪ್ಲಸ್​
ಸಮೂಹ್​ ಸೂಪರ್​ ಎಜುಕೇಷನ್​ ಪ್ಲಸ್​
ವಿಮಾ ಖಾತೆ- I
ವಿಮಾ ಖಾತೆ- 2
ಎಸ್​ಡಿಎ ಇಂಡೋವ್ಮೆಂಟ್​ ವೆಸ್ಟಿಂಗ್​21
ಸಿಡಿಎ ಇಂಡೋವ್ಮೆಂಟ್​ 18
ಜೀವನ್​ ಮಿತ್ರ್​(ದ್ವಿಗುಣ ಸುರಕ್ಷೆ)
ಧನ್​ ವಾಪಸೀ ಯೋಜನಾ-25 ವರ್ಷ
ಜೀವನ್ ಮಿತ್ರ್​(ತ್ರಿಗುಣ ಸುರಕ್ಷೆ)
ಜೀವನ್​ ಪ್ರಮುಖ್​
ಆಜೀವನ್​ ಪಾಲಿಸಿ
ಫ್ಲೋಟಿಂಗ್​ ಇನ್ಶೂರೆನ್ಸ್​ ಪಾಲಿಸಿ
ಜೀವನ್​ ಮಿತ್ಸ್​(ದ್ವಿಗುಣ ಸುರಕ್ಷೆ ಬಂದೋಬಸ್ಟ್​ ಪಾಲಿಸಿ)
ಜೀವನ್​ ಅಮೃತ್
ಜೀವನ್​ ಸುರಭಿ-15 ವರ್ಷ​
ಜೀವನ್​ ಸುರಭಿ-25 ವರ್ಷ
ಜೀವನ್​ ಅನುರಾಗ್
ಚೈಲ್ಡ್​ ಕರಿಯರ್​ ಯೋಜನಾ
ಜೀವನ್​ ಶ್ರೀ- I
ಜೀವನ್​ ಆನಂದ್
ಜೀವನ್ ಮಂಗಲ್​
ವಿಮಾ ಉಳಿಕೆ
ಅಮೂಲ್ಯ ಜೀವನ- I
ಜೀವನ್​ ಆಧಾರ್​
ಹೊಸ ಜೀವನ ನಿಧಿ
ಇಂಡೋವ್ಮೆಂಟ್​ ಪ್ಲಸ್​
ಜೀವನ್​ ವಿಶ್ವಾಸ್​
ಜೀವನ್ ಮಧುರ್
ಜೀವನ್​ ದಸೀಪ್
ಜೀವನ್​ ಸರಳ್​
ಹೊಸ ವಿಮೆ ಗೋಲ್ಡ್​
ಜೀವನ್​ ಅಂಕುರ್​
ಬಂದೋಬಸ್ತಿ ವಿಮಾ ಯೋಜನೆ
ವೈವಾಹಿಕ ಬಂದೋಬಸ್ತ್​ ಅಥವಾ ಶೈಕ್ಷಣಿಕ
ಅನ್​ಮೋಲ್​ ಜೀವನ್- I
ವಾರ್ಷಿಕ ಯೋಜನೆ
ವಿಮಾ ಹೂಡಿಕೆ 2005
ಜೀವನ್​ ಛಾಯಾ
ಕೋಮಲ್​ ಜೀವನ್​
ಜೀವನ್​ ತರಂಗ
ಜೀವನ್​ ಕಿಶೋರ್​
ಧನ್​ ವಾಪ್ಸಿ ಯೋಜನಾ-20 ವರ್ಷ

ಈ ಪ್ರಮುಖ ಪಾಲಿಸಿಗಳನ್ನು ಒಳಗೊಂಡಂತೆ ಇನ್ನೂ ಕೆಲವು ಪ್ಲಾನ್‌ಗಳು ಸ್ಥಗಿತಗೊಂಡಿವೆ. ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ LICಯ 108 ಪಾಲಿಸಿಗಳು ಸ್ಥಗಿತ

ಸ್ಥಗಿತಗೊಂಡ ಪಾಲಿಸಿ ಇದ್ದರೆ ಏನು ಮಾಡುವುದು?

ಈ ಪಾಲಿಸಿಗಳಲ್ಲಿ ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ ಚಿಂತಿಸುವ ಅಗತ್ಯವಿಲ್ಲ. ಯಾಕೆಂದರೆ ಪಾಲಿಸಿ ಮಾಡಿಸಿಕೊಂಡ ಸಂದರ್ಭದಲ್ಲಿ ನಿಮಗೆ ತಿಳಿಸಿದ್ದ ಎಲ್ಲಾ ಸೌಲಭ್ಯಗಳೂ ಸಿಗುತ್ತವೆ. ಆದರೆ ಸ್ಥಗಿತಗೊಂಡ ಈ ಪಾಲಿಸಿಗಳನ್ನು ಹೊಸ ಗ್ರಾಹಕರು ಮಾಡುವಂತಿಲ್ಲ. ಹೀಗಾಗಿ ಏಜೆಂಟ್‌ಗಳ ಮೂಲಕ ಪಾಲಿಸಿ ಮಾಡಿಕೊಳ್ಳುವವರು ಈ ವಿಚಾರದ ಕುರಿತು ಹೆಚ್ಚು ಗಮನಹರಿಸಿ, ಮೋಸ ಹೋಗದಂತೆ ಎಚ್ಚರವಹಿಸುವುದು ಅಗತ್ಯ.

100ಕ್ಕೂ ಅಧಿಕ ಪಾಲಿಸಿ ಸ್ಥಗಿತಗೊಳ್ಳಲು ಕಾರಣವೇನು?

ಆರ್ಥಿಕ ತಜ್ಞರ ಅನ್ವಯ ಸಾಮಾನ್ಯವಾಗಿ ವಿಮಾ ಕಂಪೆನಿಗಳು ತಮಗೆ ಬರುವ ಆದಾಯ ಕಡಿಮೆಯಾದಾಗ ಪಾಲಿಸಿಯನ್ನು ಸ್ಥಗಿತಗೊಳಿಸುತ್ತವೆ ಎಂದಿದ್ದಾರೆ. ಇನ್ನು ಜೀವನ್ ವಿಮಾ ಕಂಪೆನಿ ಕೂಡಾ ಬಡ್ಡಿದರದಲ್ಲಿ ಗಣನೀಯ ಕುಸಿತವಾಗುತ್ತಿರುವುದರಿಂದ ಪಾಲಿಸಿದಾರರಿಗೆ ಉತ್ತಮ ಮೊತ್ತ ನೀಡಲು ತೊಂದರೆಯಾಗುತ್ತಿದೆ. ಹೀಗಾಗಿ ಈ ಪಾಲಿಸಿಗಳನ್ನು ಬಂದ್ ಮಾಡಲಾಗಿದೆ ಎಂದು ತಿಳಿಸಿದೆ.

Comments are closed.