ರಾಷ್ಟ್ರೀಯ

ಎನ್‌ಡಿಎ ತೊರೆದ ಮತ್ತೊಂದು ಪಕ್ಷ: ಬಿಜೆಪಿಗೆ 2019ರ ಲೋಕಸಭೆ ಚುನಾವಣೆ ಕಷ್ಟ ಕಷ್ಟ?

Pinterest LinkedIn Tumblr


ನವದೆಹಲಿ: ಲೋಕಸಭೆ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಾಲೀಮು ನಡೆಸಿವೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ಬಾರಿ ಸೋಲಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ವಿಪಕ್ಷಗಳು, ಮಹಾಘಟಬಂಧನ್ ಹೆಸೆರಲ್ಲಿ ಒಂದಾಗುತ್ತಿವೆ.

ಇನ್ನು ವಿಪಕ್ಷಗಳ ಶಕ್ತಿಯನ್ನು ಎದುರಿಸಲು ಬಿಜೆಪಿ ಮತ್ತು ಎನ್‌ಡಿಎ ಕೂಡ ಹತ್ತು ಹಲವು ತಂತ್ರಗಳನ್ನು ಹೆಣೆಯುತ್ತಿದೆ. ಆದರೆ ಆಡಳಿತಾರೂಢ ಎನ್‌ಡಿಎದಿಂದ ಹೊರ ಬರುತ್ತಿರುವ ಪಕ್ಷಗಳ ಸಂಖ್ಯೆ ಜಾಸ್ತಿಯಾಗುತ್ತಿರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಅದರಂತೆ ಇಂದು ಗೋರ್ಖಾ ಜನಮುಕ್ತಿ ಮೋರ್ಚಾ(ಜಿಜೆಎಂ) ಎನ್‌ಡಿಎ ತೆಕ್ಕೆಯಿಂದ ಹೊರ ಬಂದಿದ್ದು, 2019ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ತನ್ನ ಬಹುಮತವಿಲ್ಲ ಎಂದು ಘೋಷಿಸಿದೆ.

ಇಷ್ಟೇ ಅಲ್ಲದೇ ಜಿಜೆಎಂ ಇನ್ನು ಮುಂದೆ ಮೋದಿ ವಿರೋಧಿ ಮಹಾಘಟಬಂಧನ್ ಜೊತೆ ನಿಲ್ಲಲಿದೆ ಎಂದು ಪಕ್ಷದ ಮುಖ್ಯಸ್ಥ ಬಿನಯ್ ತಮಾಂಗ್ ಸ್ಪಷ್ಟಪಡಿಸಿದ್ದಾರೆ.

Comments are closed.