ರಾಷ್ಟ್ರೀಯ

ಮೊಬೈಲ್ ಪ್ರಿಯರ ನಿದ್ದೆಗೆಡಿಸಿರುವ Xiaomi Redmi Note 7!

Pinterest LinkedIn Tumblr


ಕೈಗೆಟಕುವ ಸ್ಮಾರ್ಟ್‌ಫೋನ್‌ಗಳಿಗೆ ಮನೆಮಾತಾಗಿರುವ Xiaomi ಕಳೆದ ವಾರ ಚೀನಾದಲ್ಲಿ Redmi Note 7 ಫೋನನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ.

ಸಹಜವಾಗಿ, ಹೊಸ ಮಾದರಿ ಫೋನ್‌ನಲ್ಲಿ ನವನವೀನ ಫೀಚರ್‌ಗಳನ್ನು ಒದಗಿಸುವ Xiaomi, Redmi Note 7ನಲ್ಲೂ ಅತ್ಯಾಧುನಿಕ ಫೀಚರ್‌ಗಳನ್ನು ನೀಡಿದೆ.

48 ಮೆಗಾಪಿಕ್ಸೆಲ್ ಕ್ಯಾಮೆರಾ Redmi Note 7ನ ಪ್ರಮುಖ ಆಕರ್ಷಣೆ. ಹಿಂಬದಿ ಇನ್ನೊಂದು ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಇದ್ದು, ಮುಂದಿನ ಕ್ಯಾಮೆರ 13 ಮೆಗಾಪಿಕ್ಸೆಲ್ ಸಾಮರ್ಥ್ಯದ್ದಾಗಿದೆ.

6.3 ಇಂಚು ಪರದೆ, 19.5:9 ಆ್ಯಸ್ಪೆಕ್ಟ್ ರೇಶ್ಯೋ, ಕ್ವಾಲ್‌ಕಾಮ್ ಸ್ನ್ಯಾಪ್ ಡ್ರಾಗನ್ 660 ಪ್ರೊಸೆಸರ್, 3GB, 4GB, 6GB RAM ಹೊಂದಿದೆ. 32GB ಹಾಗೂ 64GB ಸ್ಟೋರೆಜ್ ಸಾಮರ್ಥ್ಯವಿರುವ Redmi Note 7ನ್ನು 256GB ವರೆಗೆ ವಿಸ್ತರಿಸಬಹುದು.

Redmi Note 7 ನ ಬಿಡಿಭಾಗಗಳು ಹೇಗಿವೆ? ಫೀಚರ್ಸ್‌ಗಳೇನು? ಎಂಬಿತ್ಯಾದಿ ಮಾಹಿತಿಯನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ.

ಚೀನಾದಲ್ಲಿ Redmi Note 7 ಬೆಲೆ 999 ಯಾನ್, ಅಂದರೆ ಭಾರತದ ಸರಿಸುಮಾರು 10,500 ರೂ. ಆಗಿದ್ದು ಮೊಬೈಲ್ ಪ್ರಿಯರಲ್ಲಿ ಸಂಚಲನ ಮೂಡಿಸಿದೆ.

ಆದರೆ Redmi Note 7 ಭಾರತದ ಮಾರುಕಟ್ಟೆಗೆ ಯಾವಾಗ ಕಾಲಿಡಲಿದೆ? ಈ ಬಗ್ಗೆ ಕಂಪನಿಯು ಯಾವುದೇ ಸುಳಿವನ್ನು ಬಿಟ್ಟು ಕೊಟ್ಟಿಲ್ಲ.

Comments are closed.